ಸೇನಾ ನೆಲೆಯ ಮೇಲೆ ದಾಳಿ: 17 ಅಫ್ಘಾನ್ ಸೈನಿಕರ ಸಾವು
Update: 2018-06-09 22:29 IST
ಹೆರಾತ್ (ಅಫ್ಘಾನಿಸ್ತಾನ), ಜೂ. 9: ಯುದ್ಧವಿರಾಮ ಘೋಷಿಸುವ ಗಂಟೆಗಳ ಮೊದಲು, ತಾಲಿಬಾನ್ ಭಯೋತ್ಪಾದಕರು ಪಶ್ಚಿಮ ಅಫ್ಘಾನಿಸ್ತಾನದಲ್ಲಿರುವ ಸೇನಾ ನೆಲೆಯೊಂದಕ್ಕೆ ನುಗ್ಗಿ ಕನಿಷ್ಠ 17 ಅಫ್ಘಾನ್ ಸೈನಿಕರನ್ನು ಹತ್ಯೆಗೈದಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ನಡೆದ ದಾಳಿಯಲ್ಲಿ ತಾಲಿಬಾನ್ ಕಡೆಯಲ್ಲೂ ಸಾವು-ನೋವು ಸಂಭವಿಸಿದೆ ಎಂದು ಹೆರಾತ್ ಪ್ರಾಂತೀಯ ಗವರ್ನರ್ ವಕ್ತಾರರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
ದಾಳಿಯ ಬಳಿಕ, ಸೈನಿಕರ ಶಸ್ತ್ರಾಸ್ತ್ರಗಳನ್ನು ತಾಲಿಬಾನ್ ಅಪಹರಿಸಿದೆ ಎಂದು ಝವೊಲ್ ಜಿಲ್ಲಾ ಗವರ್ನರ್ ಮುಹಮ್ಮದ್ ಸಯೀದ್ ಸರ್ವಾರಿ ಹೇಳಿದರು.