ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯರ ಆಯ್ಕೆ

Update: 2018-06-09 17:22 GMT

ವಿಶ್ವಸಂಸ್ಥೆ, ಜೂ. 9: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರಾಗಿ ಎರಡು ವರ್ಷಗಳ ಅವಧಿಗೆ ಶುಕ್ರವಾರ ಜರ್ಮನಿ, ಬೆಲ್ಜಿಯಮ್, ದಕ್ಷಿಣ ಆಫ್ರಿಕ, ಡೋಮಿನಿಕನ್ ರಿಪಬ್ಲಿಕ್ ಮತ್ತು ಇಂಡೋನೇಶ್ಯಗಳನ್ನು ಆರಿಸಲಾಯಿತು.

ಅವರ ಅಧಿಕಾರಾವಧಿ 2019 ಜನವರಿ 1ರಂದು ಆರಂಭಗೊಳ್ಳಲಿದೆ.

 ವಿಶ್ವಸಂಸ್ಥೆಯ ನಿರ್ಣಯಗಳನ್ನು ದೇಶಗಳು ಪಾಲಿಸುವುದನ್ನು ಕಡ್ಡಾಯಗೊಳಿಸುವ ಹಾಗೂ ದಿಗ್ಬಂಧನಗಳನ್ನು ವಿಧಿಸುವ ಮತ್ತು ಬಲಪ್ರಯೋಗ ನಡೆಸಲು ಆದೇಶ ನೀಡುವ ಅಧಿಕಾರವನ್ನು ಹೊಂದಿರುವ ವಿಶ್ವಸಂಸ್ಥೆಯ ಏಕೈಕ ಘಟಕ ಭದ್ರತಾ ಮಂಡಳಿಯಾಗಿದೆ.

ಏಶ್ಯ-ಪೆಸಿಫಿಕ್‌ನ ಒಂದು ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಇಂಡೋನೇಶ್ಯವು ಮಾಲ್ದೀವ್ಸ್ ದೇಶವನ್ನು 144-46 ಮತಗಳಿಂದ ಸೋಲಿಸಿತು. ಅದೇ ವೇಳೆ, ಇತರ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News