×
Ad

ಶೃಂಗಸಭೆ ಯಶಸ್ವಿಯಾದರೆ ಶ್ವೇತಭವನಕ್ಕೆ ಕಿಮ್ ಗೆ ಆಹ್ವಾನ: ಅಮೆರಿಕ ಇಂಗಿತ

Update: 2018-06-09 23:05 IST

ವಾಶಿಂಗ್ಟನ್, ಜೂ. 9: ಸಿಂಗಾಪುರದಲ್ಲಿ ಜೂನ್ 12ರಂದು ನಡೆಯಲು ನಿಗದಿಯಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ನಡುವಿನ ಶೃಂಗ ಸಮ್ಮೇಳನ ನಿರೀಕ್ಷಿತ ರೀತಿಯಲ್ಲಿ ಸಾಗಿದರೆ, ಕಿಮ್‌ರನ್ನು ಶ್ವೇತಭವನಕ್ಕೆ ಆಹ್ವಾನಿಸುವ ಇಂಗಿತವನ್ನು ಅಮೆರಿಕ ಶುಕ್ರವಾರ ವ್ಯಕ್ತಪಡಿಸಿದೆ.

ಕೆಲವು ತಿಂಗಳ ಹಿಂದಿನವರೆಗೂ, ಕಿಮ್‌ರನ್ನು ಅಮೆರಿಕದ ಅಧಿಕಾರಿಗಳು ‘ನಿರಂಕುಶಾಧಿಕಾರಿ’ ಹಾಗೂ ‘ಕ್ರೂರ ವ್ಯಕ್ತಿತ್ವ ಹೊಂದಿದವನು’ ಎಂಬುದಾಗಿ ಹಂಗಿಸುತ್ತಿದ್ದುದನ್ನು ಸ್ಮರಿಸಬಹುದಾಗಿದೆ.

‘ಪರಮಾಣು ನಿಶ್ಶಸ್ತ್ರೀಕರಣ’ ವಿಷಯದಲ್ಲಿ ಉತ್ತರ ಕೊರಿಯದೊಂದಿಗೆ ಹೆಚ್ಚಿನ ಒಮ್ಮತ ಏರ್ಪಟ್ಟಿರುವ ಇಂಗಿತವನ್ನು ಅಮೆರಿಕ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ, ಕಿಮ್‌ರ ಶ್ವೇತಭವನ ಭೇಟಿಯ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.

ಪರಮಾಣು ನಿಶ್ಶಸ್ತ್ರೀಕರಣದ ಪ್ರಮುಖ ವಿಚಾರದೊಂದಿಗೆ ಅಮೆರಿಕ ಈ ಶೃಂಗಸಭೆಗೆ ಹೋಗುತ್ತಿದ್ದು, ಅದರ ಯಶಸ್ಸಿನ ಮೇಲೆ ಶೃಂಗಸಮ್ಮೇಳನದ ಯಶಸ್ಸು ಅವಲಂಬಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News