ಅಮೆರಿಕದ ನೌಕಾ ಯೋಜನೆಗೆ ಚೀನಾ ಕನ್ನ

Update: 2018-06-09 17:40 GMT

ವಾಶಿಂಗ್ಟನ್, ಜೂ. 9: ಚೀನಾ ಸರಕಾರದ ಇಂಟರ್‌ನೆಟ್ ಕನ್ನಗಾರರು ಸಾಗರದಾಳದ ಸಮರಕ್ಕೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ಮಾಹಿತಿಗಳನ್ನು ಅಮೆರಿಕ ನೌಕಾಪಡೆಯ ಗುತ್ತಿಗೆದಾರರಿಂದ ಭಾರೀ ಪ್ರಮಾಣದಲ್ಲಿ ಕದ್ದಿದ್ದಾರೆ ಎಂದು ಶನಿವಾರ ‘ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.

ಸಬ್‌ಮರೀನ್‌ನಿಂದ ಹಾರಿಸುವ ನೂತನ ಪ್ರಕಾರದ ನೌಕಾ ನಿಗ್ರಹ ಕ್ಷಿಪಣಿಯೊಂದನ್ನು ಅಭಿವೃದ್ಧಿಪಡಿಸುವ ಗುಪ್ತ ಯೋಜನೆಗಳೂ ಕದ್ದ ಮಾಹಿತಿಗಳಲ್ಲಿ ಸೇರಿದೆ.

ಜನವರಿ ಮತ್ತು ಫೆಬ್ರವರಿಯಲ್ಲಿ ನಡೆದ ಕಳ್ಳತನದಲ್ಲಿ ಸುಮಾರು 614 ಗಿಗಾ ಬೈಟ್ (ಜಿಬಿ)ನಷ್ಟು ಮಾಹಿತಿಯನ್ನು ಕದಿಯಲಾಗಿದೆ.

ಅಮೆರಿಕದ ಸಬ್‌ಮರೀನ್‌ಗಳಲ್ಲಿ 2020ರ ವೇಳೆಗೆ ಬಳಸಲು ಬಳಸುವುದಕ್ಕಾಗಿ ಸೂಪರ್‌ಸಾನಿಕ್ ನೌಕಾ ನಿಗ್ರಹ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಸಂಬಂಧಿಸಿದ ಮಾಹಿತಿಯೂ ಕಳವಾಗಿರುವುದು ಅಮೆರಿಕದ ಕಳವಳಕ್ಕೆ ಕಾರಣವಾಗಿದೆ.

ಪರಮಾಣು ಒಪ್ಪಂದದಿಂದ ಅಮೆರಿಕ ಅಕ್ರಮವಾಗಿ ಹಿಂದೆ ಸರಿದಿರುವುದಕ್ಕೆ ಸಂಬಂಧಿಸಿದಂತೆ ರಶ್ಯ ಜೊತೆಗೆ ಹೆಚ್ಚಿನ ಮಾತುಕತೆಗಳನ್ನು ನಡೆಸಲು ನಾನು ಬಯಸಿದ್ದೇನೆ. ಪರಮಾಣು ಒಪ್ಪಂದವನ್ನು ಜಾರಿಗೊಳಿಸುವಲ್ಲಿ ರಶ್ಯದ ಪಾತ್ರ ಮಹತ್ವ ಹಾಗೂ ರಚನಾತ್ಮಕವಾಗಿತ್ತು.

ಹಸನ್ ರೂಹಾನಿ, ಇರಾನ್ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News