ಟ್ರಂಪ್-ಪುಟಿನ್ ಶೃಂಗ ಸಮ್ಮೇಳನ ವಿಯೆನ್ನಾದಲ್ಲಿ?

Update: 2018-06-09 17:41 GMT

ಮಾಸ್ಕೊ, ಜೂ. 9: ತನ್ನ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಸಂಭಾವ್ಯ ಶೃಂಗ ಸಭೆಯನ್ನು ರಾಜಧಾನಿ ವಿಯೆನ್ನಾದಲ್ಲಿ ಆಯೋಜಿಸುವ ಬಗ್ಗೆ ಈ ವಾರ ನೀಡಿದ ಭೇಟಿಯ ವೇಳೆ ಆಸ್ಟ್ರಿಯದೊಂದಿಗೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಚರ್ಚಿಸಿದ್ದಾರೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೊವ್ ಶನಿವಾರ ತಿಳಿಸಿದರು.

ಜಗತ್ತಿನ ಮುಂದುವರಿದ ದೇಶಗಳ ಒಕ್ಕೂಟ ಜಿ7ಕ್ಕೆ ರಶ್ಯವನ್ನು ಮತ್ತೆ ಸೇರ್ಪಡೆಗೊಳಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ ಒಂದು ದಿನದ ಬಳಿಕ ಪೆಸ್ಕೊವ್ ಈ ಹೇಳಿಕೆ ನೀಡಿದ್ದಾರೆ.

2014ರಲ್ಲಿ ಯುಕ್ರೇನ್‌ನ ಭಾಗವಾಗಿದ್ದ ಕ್ರೈಮಿಯಾವನ್ನು ರಶ್ಯಕ್ಕೆ ಸೇರ್ಪಡೆಗೊಳಿಸಿದ ಬಳಿಕ, ರಶ್ಯ ವಿರುದ್ಧದ ಅಂತಾರಾಷ್ಟ್ರೀಯ ದಿಗ್ಬಂಧನದ ಭಾಗವಾಗಿ ಆ ದೇಶವನ್ನು ಜಿ-7 ದೇಶಗಳ ಗುಂಪಿನಿಂದ ಹೊರಹಾಕಲಾಗಿತ್ತು.

ಮಾರ್ಚ್ 20ರಂದು ನಡೆದ ಕೊನೆಯ ಫೋನ್ ಸಂಭಾಷಣೆಯಲ್ಲಿ, ವಿಯೆನ್ನಾದಲ್ಲಿ ತಮ್ಮ ಶೃಂಗ ಸಮ್ಮೇಳನ ನಡೆಸುವ ಇಂಗಿತವನ್ನು ಉಭಯ ನಾಯಕರು ವ್ಯಕ್ತಪಡಿಸಿದ್ದರು ಎಂದು ಪೆಸ್ಕೊವ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News