ಷರತ್ತಿಗೆ ಒಪ್ಪಿದರೆ ವೀರಶೈವರನ್ನು ಸೇರಿಸಿಕೊಳ್ಳಲು ಸಿದ್ಧ: ಲಿಂಗಾಯತ ಮಹಾಸಭಾ ಮುಖಂಡ ಜಾಮದಾರ್

Update: 2018-06-10 14:06 GMT

ಬೆಂಗಳೂರು, ಜೂ. 10: ‘ವೀರಶೈವರನ್ನು ಲಿಂಗಾಯತ ಧರ್ಮದಲ್ಲಿ ಸೇರಿಸಿಕೊಳ್ಳಲು ನಾವು ಸಿದ್ಧ. ಆದರೆ, ಅವರು ನಮ್ಮ ಷರತ್ತುಗಳನ್ನು ಒಪ್ಪಿದರೆ ಮಾತ್ರ ವೀರಶೈವರನ್ನು ಸ್ವಾಗತಿಸುತ್ತೇವೆ ಎಂದು ಅಖಿಲ ಭಾರತ ಲಿಂಗಾಯತ ಮಹಾಸಭಾದ ಮುಖಂಡ, ನಿವೃತ್ತ ಐಎಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್ ಹೇಳಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವೀರಶೈವರು ಮೊದಲನೆಯದಾಗಿ ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ‘ಲಿಂಗಾಯತ-ವೀರಶೈವ ಮಹಾಸಭಾ’ ಎಂದು ಹೆಸರು ಬದಲಿಸಬೇಕು. ಧಾರ್ಮಿಕ ವಿಚಾರದಲ್ಲಿ ಅವರು ಬಸವ ತತ್ವವನ್ನು ಒಪ್ಪಿಕೊಳ್ಳಬೇಕು. ಅಲ್ಲದೆ, ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ಮಹಾಸಭಾದ ಅಧ್ಯಕ್ಷ ಸ್ಥಾನ ಹಾಗೂ ಎಂ.ಬಿ. ಪಾಟೀಲ್ ಅವರಿಗೆ ರಾಷ್ಟ್ರೀಯ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನವನ್ನು ನೀಡಬೇಕು. ಈ ಮೇಲ್ಕಂಡ ಷರತ್ತುಗಳನ್ನು ಒಪ್ಪಿದರೆ ಮಾತ್ರ ನಮ್ಮೊಂದಿಗೆ ಸೇರಿಸಿಕೊಳ್ಳಲು ಸಿದ್ಧ ಎಂದು ಜಾಮದಾರ್ ತಿಳಿಸಿದರು.

ವೀರಶೈವರು ಲಿಂಗಾಯತರ ಜತೆ ಕೈಜೋಡಿಸುವುದಾದರೆ ಸಂತೋಷ. ಒಂದು ವೇಳೆ ವೀರಶೈವರು, ಲಿಂಗಾಯತ ಎಂದು ಹೆಸರು ಬದಲಿಸಿಕೊಳ್ಳದಿದ್ದರೆ ನಾವು ಅವರ ಸೇರ್ಪಡೆಗೆ ಒಪ್ಪುವುದಿಲ್ಲ. ಮಹಾಸಭಾದಲ್ಲಿ ಅವರು ಹೊಂದಿರುವ ಅಧಿಕಾರವನ್ನು ಬಿಟ್ಟುಕೊಡಬೇಕು ಎಂದು ಜಾಮದಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News