ಇಂಟರ್ ಕಾಂಟಿನೆಂಟಲ್ ಕಪ್ ಗೆದ್ದ ಭಾರತ

Update: 2018-06-10 17:15 GMT

ಮುಂಬೈ, ಜೂ.10: ಇಂಟರ್ ಕಾಂಟಿನೆಂಟಲ್ ಕಪ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ರವಿವಾರ ಕಿನ್ಯಾಕ್ಕೆ ಭಾರತ 2-0 ಅಂತರದಲ್ಲಿ ಸೋಲುಣಿಸಿ, ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

 ನೂರು ಅಂತರ್ ರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಖ್ಯಾತಿಯನ್ನು ಹೊಂದಿರುವ ಭಾರತದ ಸ್ಟಾರ್ ಫುಟ್ಬಾಲ್ ಆಟಗಾರ ಸುನೀಲ್ ಚೆಟ್ರಿ ಅವರು ಅವಳಿ ಗೋಲು ಬಾರಿಸಿ ಭಾರತದ ಗೆಲುವಿಗೆ ನೆರವಾದರು.

 ಭಾರತ ತಂಡದ ನಾಯಕ ಸುನೀಲ್ ಚೆಟ್ರಿ ಅವರು 8ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರು. ಬಳಿಕ 29ನೇ ನಿಮಿಷದಲ್ಲಿ 2ನೇ ಗೋಲು ಜಮೆ ಮಾಡಿ ಭಾರತಕ್ಕೆ 2-0 ಮುನ್ನಡೆ ಸಾಧಿಸಲು ನೆರವಾದರು. ದ್ವಿತೀಯಾರ್ಧದಲ್ಲೂ ಮುನ್ನಡೆ ಕಾಯ್ದುಕೊಂಡ ಭಾರತ ಗೆಲುವಿನ ದಡ ಸೇರಿತು.

ಚೆಟ್ರಿ ಈ ಟೂರ್ನಿಯಲ್ಲಿ ದಾಖಲಿಸಿದ ಗೋಲುಗಳ ಸಂಖ್ಯೆಯನ್ನು 8ಕ್ಕೆ ಏರಿಸಿದ್ದಾರೆ. ತೈಪೆ ವಿರುದ್ಧ ಹ್ಯಾಟ್ರಿಕ್ ಗೋಲು ದಾಖಲಿಸಿದ್ದರು. 102 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಚೆಟ್ರಿ ದಾಖಲಿಸಿರುವ ಗೋಲುಗಳ ಸಂಖ್ಯೆಯನ್ನು 64ಕ್ಕೆ ಏರಿಸಿದ್ದಾರೆ. ಇದರೊಂದಿಗೆ ಅರ್ಜೆಂಟೀನಾದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ (64)ಅವರ ಅಂತರ್‌ರಾಷ್ಟ್ರೀಯ ಗೋಲುಗಳ ದಾಖಲೆಯನ್ನು ಸರಿಗಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News