ದಕ್ಷಿಣ ಆಫ್ರಿಕದ ಟೆಸ್ಟ್ ತಂಡಕ್ಕೆ ವಾಪಸಾದ ಡೇಲ್ ಸ್ಟೇಯ್ನ್

Update: 2018-06-11 18:15 GMT

ಕೇಪ್‌ಟೌನ್, ಜೂ.11: ಮುಂದಿನ ತಿಂಗಳು ಶ್ರೀಲಂಕಾ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ವೇಗದ ಬೌಲರ್ ಡೇಲ್ ಸ್ಟೇಯ್ನ್ ದಕ್ಷಿಣ ಆಫ್ರಿಕ ತಂಡಕ್ಕೆ ವಾಪಸಾಗಿದ್ದಾರೆ.

ಐದು ದಿನಗಳ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕದ ಪರ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಲು ಸ್ಟೇಯ್ನಿಗೆ ಮತ್ತೊಂದು ಅವಕಾಶ ನೀಡಲಾಗಿದೆ.

ಟೆಸ್ಟ್ ಕ್ರಿಕೆಟ್‌ನ ನಂ.1 ಬೌಲರ್ ವೇಗಿ ಕಾಗಿಸೊ ರಬಾಡ ಬೆನ್ನುನೋವಿನಿಂದ ಚೇತರಿಸಿಕೊಂಡು ದಕ್ಷಿಣ ಆಫ್ರಿಕ ತಂಡಕ್ಕೆ ವಾಪಸಾಗಿದ್ದಾರೆ.

 34ರ ಹರೆಯದ ಸ್ಟೇಯ್ನ ಇದೀಗ ಹ್ಯಾಂಪ್‌ಶೈರ್ ಪರ ಆಡುತ್ತಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಸ್ಟೇಯ್ನಾ ಗಾಯಾಳು ಸಮಸ್ಯೆ ಎದುರಿಸುತ್ತಿದ್ದಾರೆ.

ಭಾರತ ವಿರುದ್ಧ ಜನವರಿಯಲ್ಲಿ ನ್ಯೂಲ್ಯಾಂಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ 13 ತಿಂಗಳ ಬಳಿಕ ಭುಜನೋವಿನಿಂದ ಚೇತರಿಸಿಕೊಂಡು ಸ್ಟೇಯ್ನ್ ತಂಡಕ್ಕೆ ವಾಪಸಾಗಿದ್ದರು. ಸ್ಟೇಯ್ನೆಗೆ 2015ರ ಡಿಸೆಂಬರ್‌ನಲ್ಲಿ ಭುಜನೋವಿನ ಸಮಸ್ಯೆ ಕಾಡಲಾರಂಭಿಸಿತ್ತು. ಒಂದು ವರ್ಷದ ಬಳಿಕ ಪರ್ತ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆಡುತ್ತಿದ್ದಾಗ ಬಲ ಭುಜದಲ್ಲಿ ಗಂಭೀರ ಗಾಯವಾಗಿತ್ತು.

ಸ್ಟೇಯ್ನ 22.32ರ ಸರಾಸರಿಯಲ್ಲಿ 86 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 419 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಎಲ್ಲ ವಾತಾವರಣದಲ್ಲಿ ವಿಕೆಟ್ ಕಬಳಿಸುವ ಸಾಮರ್ಥ್ಯ ಹೊಂದಿರುವ ಟೆಸ್ಟ್ ಕ್ರಿಕೆಟ್‌ನ ಶ್ರೇಷ್ಠ ಬೌಲರ್ ಆಗಿದ್ದಾರೆ.

ದ.ಆಫ್ರಿಕದ ಟೆಸ್ಟ್ ತಂಡ

 ಎಫ್‌ಡು ಪ್ಲೆಸಿಸ್(ನಾಯಕ), ಹಾಶೀಮ್ ಅಮ್ಲ, ಟೆಂಬಾ ಬವುಮಾ, ಕ್ವಿಂಟನ್ ಡಿಕಾಕ್, ಥೇನಿಸ್ ಡಿ ಬ್ರುನ್, ಡಿಯಾನ್ ಎಲ್ಗರ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಏಡೆನ್ ಮರ್ಕರಮ್, ಲುಂಗಿಸಾನಿ ಗಿಡಿ, ವೆರ್ನಾನ್ ಫಿಲ್ಯಾಂಡರ್, ಕಾಗಿಸೊ ರಬಾಡ, ತಬ್ರೈಝ್ ಶಂಸಿ, ಡೇಲ್ ಸ್ಟೇಯ್ನಾ ಹಾಗೂ ಶಾನ್ ವಾನ್ ಬರ್ಗ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News