ಥಾಯ್ಲೆಂಡ್: ವಿಶ್ವಕಪ್ ಬೆಟ್ಟಿಂಗ್ ಜಾಗೃತಿ ಅಭಿಯಾನಕ್ಕೆ ಚಾಲನೆ

Update: 2018-06-12 18:29 GMT

ಬ್ಯಾಂಕಾಕ್, ಜೂ.12: ಬೆಟ್ಟಿಂಗ್ ಬಗ್ಗೆ ಜಾಗೃತಿ ಮೂಡಿಸಲು ಫುಟ್ಬಾಲ್ ಪಂದ್ಯವನ್ನು ಆಡಿದ ಥಾಯ್ಲೆಂಡ್‌ನ ಆನೆಗಳು ದೇಶದಲ್ಲಿ ಫಿಫಾ ವಿಶ್ವಕಪ್ ಜ್ವರ ಹೆಚ್ಚಿಸಿವೆ.

 ರಶ್ಯದಲ್ಲಿ ಈ ವರ್ಷದ ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ಥಾಯ್ಲೆಂಡ್ ದೇಶದ ಧ್ವಜದ ಬಣ್ಣದಿಂದ ಅಲಂಕರಿಸಲ್ಪಟ್ಟಿರುವ 9 ಆನೆಗಳು ಸ್ಥಳೀಯ ಶಾಲಾ ಮಕ್ಕಳ ವಿರುದ್ಧ ಏರ್ಪಡಿಸಲಾಗಿದ್ದ 15 ನಿಮಿಷಗಳ ಫುಟ್ಬಾಲ್ ಪಂದ್ಯದಲ್ಲಿ ಚೆಂಡನ್ನು ಪರಸ್ಪರ ಪಾಸ್ ಮಾಡಿ ಹಾಗೂ ಮೈದಾನದ ತುಂಬಾ ತಿರುಗಿಸಿ ಗಮನ ಸೆಳೆದವು. ‘‘ವಿಶ್ವಕಪ್‌ನ್ನು ಬೆಟ್ಟಿಂಗ್ ಇಲ್ಲದೆ ಆನಂದಿಸಬೇಕು. ಫುಟ್ಬಾಲ್ ಆಟಗಾರರನ್ನು ಹುರಿದುಂಬಿಸಬೇಕು ಎಂಬ ಜಾಗೃತಿ ಮೂಡಿಸಲು ನಾವು ಶಾಲಾ ಮಕ್ಕಳು ಹಾಗೂ ಆನೆಗಳ ನಡುವೆ ಪಂದ್ಯ ಏರ್ಪಡಿಸಿದ್ದೇವೆ’’ ಎಂದು ಸಂಘಟಕರು ಹೇಳಿದ್ದಾರೆ.

ಬೆಟ್ಟಿಂಗ್ ಅಥವಾ ಫುಟ್ಬಾಲ್‌ನಲ್ಲಿ ಜೂಜಾಟ ನಡೆಸುವುದು ಥಾಯ್ಲೆಂಡ್‌ನಲ್ಲಿ ಕ್ರಿಮಿನಲ್ ಅಪರಾಧ. ಒಂದು ವೇಳೆ ಅಪ್ರಾಪ್ತರು ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದರೆ ಅವರ ಹೆತ್ತವರು 311.32 ಡಾಲರ್ ಅಥವಾ ಮೂರು ತಿಂಗಳು ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ.

ಥಾಯ್ಲೆಂಡ್‌ನಲ್ಲಿ ಫುಟ್ಬಾಲ್ ಮೇಲೆ ಬೆಟ್ಟಿಂಗ್ ನಡೆಸುವುದು ದೊಡ್ಡ ಉದ್ಯಮವಾಗಿದೆ. ನಾವು ಈಗಾಗಲೇ 300 ಗ್ಯಾಂಬ್ಲಿಂಗ್ ವೆಬ್‌ಸೈಟ್‌ಗಳನ್ನು ಪತ್ತೆ ಹಚ್ಚಿದ್ದು, ಥಾಯ್ಲೆಂಡ್‌ನ ಹೊರಗೆ ಸರ್ವರ್ ಇರುವ ಕಾರಣ ಅವುಗಳನ್ನು ಮುಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಬ್ಯಾಂಕಾಕ್ ಪೊಲೀಸ್ ಕಮಿಶನರ್ ಲಕ್‌ಬೂನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News