ಉ.ಪ್ರದೇಶ: ಮತದಾರರನ್ನು ಸೆಳೆಯಲು 2 ಲಕ್ಷ ಜನರ ‘ಸೈಬರ್ ಸೇನೆ’ ರಚನೆಗೆ ಬಿಜೆಪಿ ಸಿದ್ಧತೆ

Update: 2018-06-13 17:13 GMT

ಕಾರ್ಯಕರ್ತರ ‘ಸೈಬರ್ ಸೇನಾ’:ಬಿಜೆಪಿ ಹೊಸದಿಲ್ಲಿ,ಜೂ.13: 2019ರ ಲೋಕಸಭಾ ಚುನಾವಣೆಗಾಗಿ ತನ್ನ ‘ಸೈಬರ್ ಸೇನಾ’ವನ್ನು ರೂಪಿಸಲು ಉತ್ತರ ಪ್ರದೇಶ ಬಿಜೆಪಿ ಘಟಕವು ಸಜ್ಜಾಗುತ್ತಿದೆ. ಇದಕ್ಕಾಗಿ ಮುಂದಿನ ಮೂರು ತಿಂಗಳುಗಳಲ್ಲಿ ರಾಜ್ಯಾದ್ಯಂತ ಸುಮಾರು ಎರಡು ಲಕ್ಷ ಸಾಮಾಜಿಕ ಮಾಧ್ಯಮಗಳ ನಿಪುಣರನ್ನು ಕಲೆ ಹಾಕುವ ಆಶಯವನ್ನು ಅದು ಹೊಂದಿದೆ.

ಇತ್ತೀಚಿಗೆ ನಡೆದ ಉ.ಪ್ರ.ಬಿಜೆಪಿ ಐಟಿ ಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆಯಲ್ಲಿ ಈ ವಿಷಯವನ್ನು ತಿಳಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಜೆಪಿಎಸ್ ರಾಥೋಡ್ ಅವರು,ರಾಜ್ಯಾದ್ಯಂತ ಸೈಬರ್ ಸೇನಾ ಅಣಿಗೊಳಿಸಲಾಗುತ್ತಿದೆ. ಪ್ರತಿ ಮತಗಟ್ಟೆಯಲ್ಲಿಯೂ ಬಿಜೆಪಿಯ ಓರ್ವ ‘ಸೈಬರ್ ಯೋಧ’ನಿರಲೇಬೇಕು ಎಂದರು.

ವಿವಿಧ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಅಂತರ್ಜಾಲ ಮತ್ತು ಸಾಮಾಜಿಕ ಮಾಧ್ಯಮಗಳು ಪರಿಣಾಮಕಾರಿ ಮತ್ತು ಸಮರ್ಥ ಸಾಧನಗಳಾಗಿವೆ. ಪಕ್ಷದ ಚಿಂತನೆಗಳನ್ನು ಜನರಿಗೆ ತಿಳಿಸುವಲ್ಲಿ ಸಹ ಅವು ಸಮರ್ಥ ಮಾಧ್ಯಮಗಳಾಗಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ನುರಿತ ಸುಮಾರು ಎರಡು ಲಕ್ಷ ಕಾರ್ಯಕರ್ತರ ಪಡೆ ಮುಂದಿನ ಮೂರು ತಿಂಗಳುಗಳಲ್ಲಿ ಸಿದ್ಧವಾಗಲಿದೆ ಎಂದರು.

ಸಂಸದೀಯ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದವರಲ್ಲಿ ಮತದಾರರಾಗಿ ನೋಂದಾಯಿಸಿ ಕೊಳ್ಳುವಂತೆ ಜಾಗೃತಿಯನ್ನು ಹರಡುವಲ್ಲಿ ಸಾಮಾಜಿಕ ಮಾಧ್ಯಮಗಳು ಪ್ರಮುಖ ಪಾತ್ರವನ್ನು ವಹಿಸಬಲ್ಲವು ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News