ಟೆಸ್ಟ್ ಕ್ರಿಕೆಟ್ ನಲ್ಲಿ 100 ವಿಕೆಟ್ ಮೈಲುಗಲ್ಲು ತಲುಪಿದ ಉಮೇಶ್ ಯಾದವ್

Update: 2018-06-15 10:39 GMT

 ಬೆಂಗಳೂರು, ಜೂ.15: ಏಕೈಕ ಟೆಸ್ಟ್ ಪಂದ್ಯದಲ್ಲಿ ಶುಕ್ರವಾರ ಅಫ್ಘಾನಿಸ್ತಾನದ ದಾಂಡಿಗ ರಹ್ಮತ್ ಶಾ ವಿಕೆಟ್ ಕಬಳಿಸಿದ ಭಾರತದ ವೇಗದ ಬೌಲರ್ ಉಮೇಶ್ ಯಾದವ್ ಟೆಸ್ಟ್ ಕ್ರಿಕೆಟ್‌ನಲ್ಲಿ 100 ವಿಕೆಟ್ ಮೈಲುಗಲ್ಲು ತಲುಪಿದ್ದಾರೆ. ಈ ಸಾಧನೆ ಮಾಡಿದ ಭಾರತದ 8ನೇ ವೇಗದ ಬೌಲರ್ ಎನಿಸಿಕೊಂಡಿದ್ದಾರೆ.

30ರ ಹರೆಯದ ಯಾದವ್ ತನ್ನ 37ನೇ ಟೆಸ್ಟ್ ಪಂದ್ಯದಲ್ಲಿ 100 ವಿಕೆಟ್ ಪೂರೈಸಿದ್ದಾರೆ. ವಿದರ್ಭದ ಬೌಲರ್ ಯಾದವ್ 2011ರಲ್ಲಿ ತನ್ನ 24ನೇ ವಯಸ್ಸಿನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. ಈತನಕ ಉಮೇಶ್ ಸಹಿತ ಒಟ್ಟು 22 ಭಾರತದ ಬೌಲರ್‌ಗಳು ಟೆಸ್ಟ್‌ನಲ್ಲಿ 100 ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್ ಕಬಳಿಸಿದ್ದಾರೆ.

ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ (132 ಪಂದ್ಯ, 619 ವಿಕೆಟ್) ಪಡೆದ ಭಾರತದ ಬೌಲರ್ ಆಗಿದ್ದಾರೆ. ವೇಗದ ಬೌಲರ್‌ಗಳ ಪೈಕಿ ಲೆಜೆಂಡರಿ ಆಲ್‌ರೌಂಡರ್ ಕಪಿಲ್‌ದೇವ್ 131 ಟೆಸ್ಟ್ ಪಂದ್ಯಗಳಲ್ಲಿ 434 ವಿಕೆಟ್ ಉರುಳಿಸಿದ್ದಾರೆ.

ಟೆಸ್ಟ್‌ನಲ್ಲಿ 100 ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ ವೇಗದ ಬೌಲರ್‌ಗಳು

*ಕಪಿಲ್‌ದೇವ್-131 ಟೆಸ್ಟ್‌ಗಳಲ್ಲಿ 434 ವಿಕೆಟ್‌ಗಳು

* ಝಹೀರ್ ಖಾನ್-92 ಟೆಸ್ಟ್‌ಗಳಲ್ಲಿ 311 ವಿಕೆಟ್‌ಗಳು

*ಜಾವಗಲ್ ಶ್ರೀನಾಥ್-67 ಟೆಸ್ಟ್‌ಗಳಲ್ಲಿ 236 ವಿಕೆಟ್‌ಗಳು

* ಇಶಾಂತ್ ಶರ್ಮ-82 ಟೆಸ್ಟ್‌ಗಳಲ್ಲಿ 236 ವಿಕೆಟ್‌ಗಳು

* ಮುಹಮ್ಮದ್ ಶಮಿ-30 ಟೆಸ್ಟ್‌ಗಳಲ್ಲಿ 110 ವಿಕೆಟ್‌ಗಳು

* ಕರ್ಸನ್ ಘಾವ್ರಿ-39 ಟೆಸ್ಟ್‌ಗಳಲ್ಲಿ 109 ವಿಕೆಟ್‌ಗಳು

* ಇರ್ಫಾನ್ ಪಠಾಣ್-29 ಟೆಸ್ಟ್‌ಗಳಲ್ಲಿ 100 ವಿಕೆಟ್

* ಉಮೇಶ್ ಯಾದವ್-37 ಟೆಸ್ಟ್‌ಗಳಲ್ಲಿ 100 ವಿಕೆಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News