ತೆರಿಗೆ ವಂಚನೆ: 2 ವರ್ಷ ಜೈಲು ಹಾಗೂ ದಂಡ ತೆರಲು ರೊನಾಲ್ಡೊ ಸಮ್ಮತಿ

Update: 2018-06-15 17:11 GMT

 ಮ್ಯಾಡ್ರಿಡ್, ಜೂ.15: ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ರಿಯಲ್ ಮ್ಯಾಡ್ರಿಡ್ ಹಾಗೂ ಪೋರ್ಚುಗಲ್‌ನ ಫಾರ್ವರ್ಡ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಸ್ಪೇನ್‌ನ ತೆರಿಗೆ ಪ್ರಾಧಿಕಾರರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಎರಡು ವರ್ಷಗಳ ಜೈಲು ಸಜೆಯ ಜೊತೆಗೆ 18.8 ಮಿಲಿಯನ್ ಯುರೋ(21.8 ಮಿಲಿಯನ್ ಡಾಲರ್)ದಂಡ ಪಾವತಿಸಲು ಒಪ್ಪಿಕೊಂಡಿದ್ದಾರೆ ಎಂದು ದಿನಪತ್ರಿಕೆಯೊಂದು ಶುಕ್ರವಾರ ವರದಿ ಮಾಡಿದೆ.

ಒಪ್ಪಂದದ ಪ್ರಕಾರ ರೊನಾಲ್ಡೊ ಜೈಲು ಸಜೆ ಅನುಭವಿಸುವ ಸಾಧ್ಯತೆಯಿಲ್ಲ. ಸ್ಪೇನ್ ಕಾನೂನು ಪ್ರಕಾರ ಮೊದಲ ತಪ್ಪಿಗೆ ಎರಡು ವರ್ಷದೊಳಗೆ ಶಿಕ್ಷೆಯಾದರೆ ಅದನ್ನು ಅನುಭವಿಸಬೇಕಾಗಿಲ್ಲ.

33ರ ಹರೆಯದ ರೊನಾಲ್ಡೊ ವಿರುದ್ಧ 14.7 ಮಿಲಿಯನ್ ಯುರೋಸ್ ತೆರಿಗೆ ವಂಚಿಸಿದ ಆರೋಪವಿದೆ. ರೊನಾಲ್ಡೊ ಈ ಆರೋಪವನ್ನು ನಿರಾಕರಿಸುತ್ತಿದ್ದಾರೆ. ಇದೀಗ ರೊನಾಲ್ಡೊ ರಶ್ಯದಲ್ಲಿ ವಿಶ್ವಕಪ್ ಟೂರ್ನಿಯನ್ನು ಆಡಲು ತೆರಳಿದ್ದಾರೆ.

ಪ್ರಮುಖ ಫುಟ್ಬಾಲ್ ಆಟಗಾರರು ತೆರಿಗೆ ವಂಚಿಸುತ್ತಿರುವ ಬಗ್ಗೆ ಇತ್ತೀಚೆಗೆ ಸ್ಪೇನ್ ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿತ್ತು. 2017ರಲ್ಲಿ ಬಾರ್ಸಿಲೋನದ ಲಿಯೊನೆಲ್ ಮೆಸ್ಸಿಗೆ ತೆರಿಗೆ ವಂಚನೆ ಮಾಡಿದ ಪ್ರಕರಣದಲ್ಲಿ 21 ತಿಂಗಳು ಜೈಲು ಸಜೆ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News