×
Ad

ಅನಂತ್‌ನಾಗ್‌ನಲ್ಲಿ ಘರ್ಷಣೆ: 20 ವರ್ಷದ ಯುವಕ ಸಾವು

Update: 2018-06-16 23:19 IST

ಶ್ರೀನಗರ, ಜೂ. 16:  ಪೊಲೀಸರು ಹಾಗೂ ನಾಗರಿಕರ ನಡುವೆ ಘರ್ಷಣೆ ಭುಗಿಲೆದ್ದಿದ್ದು, ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಪಟ್ಟಣದಲ್ಲಿ ಶನಿವಾರ 20 ವರ್ಷದ ಯುವಕನೋರ್ವನ ಹತ್ಯೆಯಾಗಿದೆ. ಅನಂತ್‌ನಾಗ್‌ನ ಜಂಗ್ಲಾಟ್ ಮಂಡಿ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಸುಮಾರು 10 ಮಂದಿ ಗಾಯಗೊಂಡಿದ್ದಾರೆ. 

ಇವರಲ್ಲಿ ಗಂಭೀರ ಗಾಯಗೊಂಡ ಬ್ರಾಕ್‌ಪೋರಾದ ಶೀರಾಝ್ ಅಹ್ಮದ್ ಮೃತಪಟ್ಟಿದ್ದಾರೆ ಎಂದು ವ್ಯೆದ್ಯರು ತಿಳಿಸಿದ್ದಾರೆ. ಸೇನೆ ಶುಕ್ರವಾರ ನಡೆಸಿದ ಗೋಲಿಬಾರ್‌ನಲ್ಲಿ ಯುವಕನೋರ್ವ ಮೃತಪಟ್ಟಿರುವುದನ್ನು ಪ್ರತಿಭಟಸಿ ಅನಂತ್‌ನಾಗ್‌ನಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಪುಲ್ವಾಮದಲ್ಲಿ ಶನಿವಾರ ಜನರು ಪ್ರತಿಭಟನೆ ನಡೆಸಿದರು. ರಮಝಾನ್ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಕದನ ವಿರಾಮ ಘೋಷಿಸಿದ ಬಳಿಕ ಸೇನಾ ಗೋಲಿಬಾರ್‌ಗೆ ನಾಗರಿಕ ಹತ್ಯೆಯಾಗಿರುವುದು ಇದೇ ಮೊದಲು. ಶೋಪಿಯಾನದಲ್ಲಿ ಕಲ್ಲು ತೂರಾಟದ ಪ್ರಕರಣಗಳು ವರದಿಯಾಗಿವೆ. ಉತ್ತರ ಕಾಶ್ಮೀರದ ಸೋಪೊರೆ ಹಾಗೂ ಕುಪ್ವಾರ ಪ್ರದೇಶದಲ್ಲಿ ಪ್ರತಿಭಟನಾಕಾರರು ಹಾಗೂ ಸೇನೆಯ ನಡುವೆ ಘರ್ಷಣೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News