ಪ್ರತೀ ವರ್ಷ ಘಟಿಕೋತ್ಸವ ನಡೆಸಲು ವಿವಿಗಳಿಗೆ ಸೂಚನೆ

Update: 2018-06-17 13:48 GMT

ಹೊಸದಿಲ್ಲಿ, ಜೂ.17: ಕಡ್ಡಾಯವಾಗಿ ಪ್ರತೀ ವರ್ಷ ಘಟಿಕೋತ್ಸವ ಕಾರ್ಯಕ್ರಮ ನಡೆಸಬೇಕು ಎಂದು ಎಲ್ಲಾ ವಿಶ್ವವಿದ್ಯಾನಿಲಯಗಳಿಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸೂಚಿಸಿದೆ.

ಕೆಲವು ವಿವಿಗಳು ಆರ್ಥಿಕ ಕೊರತೆಯ ಕಾರಣ ಅಥವಾ ಸಮಯದ ಅಭಾವದ ಕಾರಣ ನೀಡಿ ಘಟಿಕೋತ್ಸವವನ್ನು ನಿಯಮಿತವಾಗಿ ನಡೆಸದಿರುವುದು ಗಮನಕ್ಕೆ ಬಂದಿದೆ. ಪದವಿ ಪ್ರದಾನ ಕಾರ್ಯಕ್ರಮ ಪ್ರತೀ ವರ್ಷ ನಡೆಯಬೇಕು. ಯಾಕೆಂದರೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರ ಪಾಲಿಗೆ ಇದೊಂದು ಸ್ಮರಣೀಯ ಘಟನೆಯಾಗಿರುತ್ತದೆ ಎಂದು ಇಲಾಖೆಯ ಹಿರಿಯ ಸಚಿವರು ತಿಳಿಸಿದ್ದಾರೆ. ಅಲ್ಲದೆ ತಾವು ನಡೆಸಿದ ಘಟಿಕೋತ್ಸವದ ವಿವರ ನೀಡುವಂತೆ ವಿವಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News