ಹಮಾಸ್ ‘ಸೇನಾ ಗುರಿ’ಗಳ ಮೇಲೆ ಇಸ್ರೇಲ್ ಯುದ್ಧವಿಮಾನಗಳ ದಾಳಿ

Update: 2018-06-18 17:23 GMT
ಸಾಂದರ್ಭಿಕ ಚಿತ್ರ

ಜೆರುಸಲೇಂ, ಜೂ. 18: ಉತ್ತರ ಗಾಝಾ ಪಟ್ಟಿಯಲ್ಲಿರುವ 9 ಹಮಾಸ್ ‘ಸೇನಾ ಗುರಿ’ಗಳ ಮೇಲೆ ಇಸ್ರೇಲ್ ಯುದ್ಧವಿಮಾನಗಳು ಸೋಮವಾರ ದಾಳಿ ನಡೆಸಿವೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

ಇಸ್ರೇಲಿ ಭೂಭಾಗಕ್ಕೆ ಉರಿಯುವ ಗಾಳಿಪಟಗಳನ್ನು ಹಾರಿಸಿರುವುದಕ್ಕೆ ಪ್ರತಿಯಾಗಿ ವಾಯು ದಾಳಿಗಳನ್ನು ನಡೆಸಲಾಗಿದೆ ಎಂದು ಅದು ಹೇಳಿದೆ.

ಎರಡು ಹಮಾಸ್ ಸೇನಾ ನೆಲೆಗಳು ಮತ್ತು ಒಂದು ಮದ್ದುಗುಂಡು ಉತ್ಪಾದನಾ ಕಾರ್ಖಾನೆ ದಾಳಿಗೊಳಗಾದ ಸ್ಥಳಗಳಲ್ಲಿ ಸೇರಿವೆ.

ಆದರೆ, ಈ ದಾಳಿಗಳಲ್ಲಿ ಸಾವು-ನೋವು ಸಂಭವಿಸಿದವೇ ಎನ್ನುವ ಮಾಹಿತಿಯನ್ನು ಸೇನೆ ನೀಡಿಲ್ಲ.

 ‘ಬೆಂಕಿಯುಂಡೆಗಳು’ ಮತ್ತು ದಹನಶೀಲ ಪದಾರ್ಥಗಳನ್ನು ಹೊತ್ತ ಗಾಳಿಪಟಗಳನ್ನು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಫೆಲೆಸ್ತೀನಿಯರು ಇಸ್ರೇಲ್ ಭೂಭಾಗದತ್ತ ಹಾರಿಸುತ್ತಿದ್ದಾರೆ.

ಇಸ್ರೇಲ್‌ನತ್ತ ದಹನಶೀಲ ಪದಾರ್ಥಗಳನ್ನು ಹಾರಿಸಲು ಪ್ರಯತ್ನಿಸುತ್ತಿದ್ದ ಇಬ್ಬರು ಫೆಲೆಸ್ತೀನಿಯರನ್ನು ಗಾಝಾ ಪಟ್ಟಿಯಲ್ಲಿ ಶನಿವಾರ ಗಾಯಗೊಳಿಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ.

ಮಾರ್ಚ್ ಕೊನೆಯಲ್ಲಿ ಫೆಲೆಸ್ತೀನಿಯರ ಪ್ರತಿಭಟನೆ ಆರಂಭವಾದಂದಿನಿಂದ ಇಸ್ರೇಲ್‌ನಲ್ಲಿ 300 ಬೆಂಕಿ ಪ್ರಕರಣಗಳು ವರದಿಯಾಗಿದ್ದು, ಹಲವಾರು ಸಾವಿರ ಹೆಕ್ಟೇರ್ ಹೊಲ ಮತ್ತು ಅರಣ್ಯ ಬೆಂಕಿಗಾಹುತಿಯಾಗಿದೆ ಎಂದು ಇಸ್ರೇಲ್ ಅಗ್ನಿಶಾಮಕ ಇಲಾಖೆ ಆರೊಪಿಸಿದೆ.

ಇದೇ ಅವಧಿಯಲ್ಲಿ ಇಸ್ರೇಲ್ ಸೈನಿಕರ ಗುಂಡಿಗೆ ಕನಿಷ್ಠ 130 ಫೆಲೆಸ್ತೀನಿಯರು ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News