ಪಾಕ್: ಮುಶರ್ರಫ್ ನಾಮಪತ್ರ ತಿರಸ್ಕಾರ

Update: 2018-06-19 17:56 GMT

ಇಸ್ಲಾಮಾಬಾದ್, ಜೂ. 19: ಪಾಕಿಸ್ತಾನದ ಸಂಸದೀಯ ಚುನಾವಣೆಗಳಲ್ಲಿ ಸ್ಪರ್ಧಿಸುವುದಕ್ಕಾಗಿ ಮಾಜಿ ಸೇನಾಡಳಿತಗಾರ ಪರ್ವೇಝ್ ಮುಶರ್ರಫ್ ಸಲ್ಲಿಸಿರುವ ನಾಮಪತ್ರಗಳನ್ನು ಚುನಾವಣಾಧಿಕಾರಿ ಇಂದು ತಿರಸ್ಕರಿಸಿದ್ದಾರೆ.

ಪೇಶಾವರ ಹೈಕೋರ್ಟ್ 2013ರಲ್ಲಿ, ಮುಶರ್ರಫ್ ಚುನಾವಣೆಯಲ್ಲಿ ಸ್ಪರ್ಧಿಸುವ ಮೇಲೆ ಆಜೀವ ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಈ ಕ್ರಮ ತೆಗೆದುಕೊಂಡಿದ್ದಾರೆ.

ಖೈಬರ್ ಪಖ್ತೂಂಖ್ವ ಪ್ರಾಂತದ ಚಿತ್ರಲ್‌ನಿಂದ ಸ್ಪರ್ಧಿಸಲು 74 ವರ್ಷದ ಮುಶರ್ರಫ್ ನಾಮಪತ್ರ ಸಲ್ಲಿಸಿದ್ದರು.

ಮುಶರ್ರಫ್ ಜೂನ್ 13ರಂದು ಸುಪ್ರೀಂ ಕೋರ್ಟ್‌ನಲ್ಲಿ ವೈಯಕ್ತಿಕವಾಗಿ ಹಾಜರಾದರೆ, ನಾಮಪತ್ರ ಸಲ್ಲಿಸಬಹುದು ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ, ಮುಶರ್ರಫ್ ಈ ಅವಧಿಯಲ್ಲಿ ಮುಶರ್ರಫ್ ಹಾಜರಾಗಿಲ್ಲ. ಹಾಗಾಗಿ, ನಾಮಪತ್ರ ಸಲ್ಲಿಸಲು ಅವರಿಗೆ ನೀಡಲಾಗಿದ್ದ ಅವಕಾಶವನ್ನು ಸುಪ್ರೀಂ ಕೋರ್ಟ್ ಹಿಂದಕ್ಕೆ ಪಡೆದುಕೊಂಡಿದೆ.

ಪಾಕಿಸ್ತಾನ ಸಂಸತ್‌ಗೆ ಜುಲೈ 25ರಂದು ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News