ಟರ್ಕಿ: ವಾಯು ದಾಳಿಯಲ್ಲಿ 26 ಬಂಡುಕೋರರು ಹತ

Update: 2018-06-19 18:33 GMT

ಇಸ್ತಾಂಬುಲ್, ಜೂ. 19: ಟರ್ಕಿ ವಾಯು ಪಡೆ ಈ ವಾರ ಆಗ್ನೇಯ ಟರ್ಕಿ ಮತ್ತು ಉತ್ತರ ಇರಾಕ್‌ನಲ್ಲಿ ನಡೆಸಿದ ದಾಳಿಗಳಲ್ಲಿ 26 ಬಂಡುಕೋರರು ಹತರಾಗಿದ್ದಾರೆ ಹಾಗೂ ಅವರ ಆಶ್ರಯ ತಾಣಗಳು ಮತ್ತು ಮದ್ದುಗುಂಡು ಉಗ್ರಾಣಗಳನ್ನು ನಾಶಪಡಿಸಲಾಗಿದೆ ಎಂದು ಟರ್ಕಿ ಸೇನೆ ಮಂಗಳವಾರ ತಿಳಿಸಿದೆ.

ಟರ್ಕಿಯ ದಿಯಾರ್‌ಬಾಕಿರ್ ಮತ್ತು ಸಿರ್ನಾಕ್ ಪ್ರಾಂತಗಳು ಹಾಗೂ ಉತ್ತರ ಇರಾಕ್‌ನ ಅವಸಿನ್-ಬಸ್ಯನ್ ಪ್ರದೇಶಗಳಲ್ಲಿ ರವಿವಾರ ಮತ್ತು ಸೋಮವಾರ ವಾಯು ದಾಳಿಗಳನ್ನು ನಡೆಸಲಾಯಿತು ಎಮದು ಹೇಳಿಕೆಯೊಂದರಲ್ಲಿ ಸೇನೆ ತಿಳಿಸಿದೆ.

ಈ ಸ್ಥಳಗಳಲ್ಲಿ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ ಎಂಬ ಬಂಡುಕೋರ ಸಂಘಟನೆ ನೆಲೆಗಳನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News