ರಶೀದ್ ಪ್ರಹಾರ: ಇಂಗ್ಲೆಂಡ್‌ಗೆ ಭರ್ಜರಿ ಜಯ

Update: 2018-06-20 18:53 GMT

ನಾಟಿಂಗ್‌ಹ್ಯಾಮ್, ಜೂ.20: ಆಸ್ಟ್ರೇಲಿಯ ವಿರುದ್ಧದ ಮೂರನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಗರಿಷ್ಠ ಮೊತ್ತದ ರನ್ ದಾಖಲಿಸಿದ್ದ ಇಂಗ್ಲೆಂಡ್ 242 ರನ್‌ಗಳ ಭರ್ಜರಿ ಜಯ ಗಳಿಸಿದೆ.

  ನಾಟಿಂಗ್‌ಹ್ಯಾಮ್‌ನಲ್ಲಿ ಮಂಗಳವಾರ ರಾತ್ರಿನಡೆದ ಪಂದ್ಯದಲ್ಲಿ ಗೆಲುವಿಗೆ 482 ರನ್‌ಗಳ ಕಠಿಣ ಸವಾಲು ಪಡೆದಿದ್ದ ಆಸ್ಟ್ರೇಲಿಯ ತಂಡ 37 ಓವರ್‌ಗಳಲ್ಲಿ 239 ರನ್‌ಗಳಿಗೆ ಆಲೌಟಾಗಿದೆ.

ಇಂಗ್ಲೆಂಡ್‌ನ ಆದಿಲ್ ರಶೀದ್ (47ಕ್ಕೆ 4), ಮೊಯಿನ್ ಅಲಿ(28ಕ್ಕೆ 3), ವಿಲ್ಲಿ(56ಕ್ಕೆ 2) ದಾಳಿಗೆ ಸಿಲುಕಿದ ಆಸ್ಟ್ರೇಲಿಯ ತಂಡ ಬೇಗನೇ ಬ್ಯಾಟಿಂಗ್‌ನ್ನು ಮುಗಿಸಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್ ಇನ್ನೂ 2 ಪಂದ್ಯಗಳು ಬಾಕಿ ಇರುವಾಗಲೇ 3-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಆಸ್ಟ್ರೇಲಿಯ ತಂಡದ ಟ್ರಾವಿಸ್ ಹೆಡ್(51) ಅರ್ಧಶತಕ ಗಳಿಸಿದರು. ಇವರನ್ನು ಹೊರತುಪಡಿಸಿದರೆ ಮಾರ್ಕ್ ಸ್ಟೋನಿಸ್(44), ಫಿಂಚ್(20), ಶಾನ್ ಮಾರ್ಷ್ (24), ಮ್ಯಾಕ್ಸ್‌ವೆಲ್(19) , ಶಾರ್ಟ್ (15),ಅಗರ್(25), ರಿಚರ್ಡ್ಸನ್(14) ಎರಡಂಕೆಯ ಸ್ಕೋರ್ ದಾಖಲಿಸಿದರು.

 ಇಂಗ್ಲೆಂಡ್: 481/6: ಇಂಗ್ಲೆಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 481 ರನ್ ಗಳಿಸಿತು. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ ಗಳಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿತ್ತು.

►ಸಂಕ್ಷಿಪ್ತ ಸ್ಕೋರ್ ವಿವರ

ಇಂಗ್ಲೆಂಡ್ 50 ಓವರ್‌ಗಳಲ್ಲಿ 481/6 (ಹೇಲ್ಸ್ 147, ಬೈರ್‌ಸ್ಟೋವ್ 139, ರಾಯ್ 82, ಮೊರ್ಗನ್ 67; ರಿಚರ್ಡ್ಸನ್ 92ಕ್ಕೆ 3).

ಆಸ್ಟ್ರೇಲಿಯ 37 ಓವರ್‌ಗಳಲ್ಲಿ ಆಲೌಟ್ 239 ( ಹೆಡ್ 51, ಸ್ಟೋನಿಸ್ 44; ರಶೀದ್ 47ಕ್ಕೆ 4, ಅಲಿ 28ಕ್ಕೆ 3) .

ಪಂದ್ಯಶ್ರೇಷ್ಠ : ಅಲೆಕ್ಸ್ ಹೇಲ್ಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News