ಸಿರಿಯ ಯುದ್ಧಾಪರಾಧ ತನಿಖೆ, ವರದಿಯಲ್ಲಿ ಹಲವು ಪುಟಗಳ ನಾಪತ್ತೆ: ನ್ಯೂಯಾರ್ಕ್ ಟೈಮ್ಸ್ ಆರೋಪ

Update: 2018-06-22 16:31 GMT

ಲಂಡನ್, ಜೂ. 22: ಸಿರಿಯದಲ್ಲಿ ನಡೆದಿದೆಯೆನ್ನಲಾದ ಯುದ್ಧಾಪರಾಧಗಳ ತನಿಖೆ ಮತ್ತು ವರದಿಯಿಂದ ಹಲವು ಪುಟಗಳಷ್ಟು ಪುರಾವೆಯನ್ನು ಕೈಬಿಡಲಾಗಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಹಿಂದಿನ ಕರಡು ವರದಿಯಲ್ಲಿದ್ದ 7 ಪುಟಗಳ ವಿಷಯವನ್ನು ಬುಧವಾರ ಪ್ರಕಟಿಸಲಾದ ಅಂತಿಮ ವರದಿಯಲ್ಲಿ ಎರಡು ಪ್ಯಾರಾಗ್ರಾಫ್‌ಗಳಿಗೆ ಇಳಿಸಲಾಗಿದೆ ಎಂದು ಪತ್ರಿಕೆ ಹೇಳಿದೆ.

ಕೈಬಿಡಲಾದ ಪುಟಗಳಲ್ಲಿದ್ದ ಮಾಹಿತಿಗಳು ಪೂರ್ವ ಘೌತದಲ್ಲಿ ನಡೆದ ರಾಸಾಯನಿಕ ದಾಳಿಯ ಬಗ್ಗೆ ಹೆಚ್ಚಿನ ಭಯಾನಕ ಚಿತ್ರಣವನ್ನು ನೀಡುತ್ತವೆ. ಅದು ಈ ಹಿಂದೆ ವರದಿಯಾಗಿರಲಿಲ್ಲ ಎಂದಿದೆ.

ರಾಸಾಯನಿಕ ದಾಳಿಗಳಿಗೆ ಸಿರಿಯದ ಸರಕಾರಿ ಪಡೆಗಳು ಮತ್ತು ಅವುಗಳ ಮಿತ್ರಪಕ್ಷಗಳು ಕಾರಣ ಎಂಬುದಾಗಿ ಅಂತಿಮ ವರದಿಯಿಂದ ಕೈಬಿಡಲಾದ ಪುಟಗಳು ಹೇಳುತ್ತವೆ.

ಆದರೆ, ಈ ಹೇಳಿಕೆಗಳನ್ನು ಸಿರಿಯದ ಬಶರ್ ಅಸಾದ್ ಸರಕಾರ ಮತ್ತು ಅದರ ಮಿತ್ರ ದೇಶಗಳಾದ ರಶ್ಯ ಮತ್ತು ಇರಾನ್‌ಗಳು ನಿರಾಕರಿಸುತ್ತವೆ.

ಕರಡು ವರದಿಯಲ್ಲಿದ್ದ ಹೆಚ್ಚಿನ ವಿವರಗಳನ್ನು ಕೈಬಿಡಲಾಗಿದೆ, ಯಾಕೆಂದರೆ ಅವುಗಳಿಗೆ ಹೆಚ್ಚಿನ ದೃಢೀಕರಣ ಮತ್ತು ಸ್ಪಷ್ಟೀಕರಣ ಅಗತ್ಯವಾಗಿದೆ ಎಂದು ವಿಶ್ವಸಂಸ್ಥೆಯ ತನಿಖಾ ಆಯೋಗದ ಸದಸ್ಯರೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News