ಲಿಬಿಯ ಕರಾವಳಿಯಲ್ಲಿ 220 ವಲಸಿಗರ ಜಲಸಮಾಧಿ

Update: 2018-06-22 17:02 GMT

ಜಿನೇವ, ಜೂ. 22: ಲಿಬಿಯ ಕರಾವಳಿಯಲ್ಲಿ 2 ದಿನಗಳ ಅವಧಿಯಲ್ಲಿ 200ಕ್ಕೂ ಅಧಿಕ ವಲಸಿಗರು ಮುಳುಗಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಇದರೊಂದಿಗೆ, ಆಫ್ರಿಕ ಮತ್ತು ಯುರೋಪ್ ನಡುವಣ ಪ್ರಮುಖ ವಲಸೆ ಮಾರ್ಗದಲ್ಲಿ ಈ ವರ್ಷ ಪ್ರಾಣ ಕಳೆದುಕೊಂಡವರ ಸಂಖ್ಯೆ ಕನಿಷ್ಠ 1,000ಕ್ಕೇರಿದೆ.

ಈ ಸಾವುಗಳಿಂದ ತನಗೆ ‘ಆಘಾತ’ವಾಗಿರುವುದಾಗಿ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಶನರ್ (ಯುಎನ್‌ಎಚ್‌ಸಿಆರ್) ಗುರುವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ ಹಾಗೂ ನಿರಂತರವಾಗಿ ಸಂಭವಿಸುತ್ತಿರುವ ಸಾವುಗಳನ್ನು ನಿಲ್ಲಿಸಲು ತುರ್ತು ಕ್ರಮ ತೆಗೆದುಕೊಳ್ಳುವಂತೆ ಕರೆ ನೀಡಿದ್ದಾರೆ.

 ‘‘ನಿರಾಶ್ರಿತರು ಮತ್ತು ವಲಸಿಗರು ಸಮುದ್ರದಲ್ಲಿ ನಿರಂತರವಾಗಿ ಸಾವಿಗೀಡಾಗುತ್ತಿರುವ ಘಟನೆಗಳಿಂದ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಶನರ್ ಆಘಾತಗೊಂಡಿದ್ದಾರೆ. ಸರಕಾರೇತರ ಸಂಘಟನೆಗಳು ಮತ್ತು ವಾಣಿಜ್ಯ ಹಡಗುಗಳು ಸೇರಿದಂತೆ ಸಂಬಂಧಪಟ್ಟ ಎಲ್ಲರಿಗೂ ಮೆಡಿಟರೇನಿಯನ್ ಸಮುದ್ರದಾದ್ಯಂತ ರಕ್ಷಣಾ ಪ್ರಯತ್ನಗಳನ್ನು ಹೆಚ್ಚಿಸಲು ಸಾಧ್ಯವಾಗುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅದು ಕರೆ ನೀಡುತ್ತದೆ’’ ಎಂದು ಯುಎನ್‌ಎಚ್‌ಸಿಆರ್ ಹೇಳಿದೆ.

ಮಂಗಳವಾರ ಮತ್ತು ಬುಧವಾರ ನಡೆದ ಮೂರು ಪ್ರತ್ಯೇಕ ಘಟನೆಗಳಲ್ಲಿ ಸುಮಾರು 220 ವಲಸಿಗರು ಮುಳುಗಿ ಮೃತಪಟ್ಟಿದ್ದಾರೆ ಎಂದು ಯುಎನ್‌ಎಚ್‌ಸಿಆರ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News