ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ 40 ವಲಸಿಗ ಭಾರತೀಯರ ಬಂಧನ

Update: 2018-06-22 17:09 GMT

ವಾಶಿಂಗ್ಟನ್, ಜೂ. 22: ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಿದ ಆರೋಪದಲ್ಲಿ ಇನ್ನೂ ಕನಿಷ್ಠ 40 ಭಾರತೀಯರನ್ನು ಬಂಧಿಸಲಾಗಿದೆ. ಇದರೊಂದಿಗೆ, ಭಾರತದಿಂದ ಬಂಧನಕ್ಕೊಳಗಾದವರ ಸಂಖ್ಯೆ 92 ಅಥವಾ ಅದಕ್ಕೂ ಹೆಚ್ಚಾಗಿದೆ.

 ಭಾರತೀಯರ ಈ ಹೊಸ ಗುಂಪನ್ನು ನ್ಯೂ ಮೆಕ್ಸಿಕೊ ರಾಜ್ಯದ ಒಟೆರೊದಲ್ಲಿರುವ ಫೆಡರಲ್ ಜೈಲೊಂದರಲ್ಲಿ ಇಡಲಾಗಿದೆ.

ಹೊಸದಾಗಿ ಪತ್ತೆಯಾಗಿರುವ ಭಾರತೀಯರ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಾಗಿಲ್ಲ. ಈ ಗುಂಪಿನಲ್ಲಿ ಎಷ್ಟು ಜನರಿದ್ದಾರೆ ಎಂಬ ಮಾಹಿತಿ ಕೋರಿ ಸಲ್ಲಿಸಲಾಗಿರುವ ಪ್ರಶ್ನೆಗಳಿಗೆ ವಲಸೆ ಮತ್ತು ಸುಂಕ ಅನುಷ್ಠಾನ ಇಲಾಖೆ ಇನ್ನೂ ಉತ್ತರ ನೀಡಿಲ್ಲ.

ಇದಕ್ಕೂ ಮೊದಲು ಭಾರತದ 52 ಪುರುಷರ ಗುಂಪೊಂದನ್ನು ಒರೆಗಾನ್ ರಾಜ್ಯದ ಶೆರಿಡನ್‌ನಲ್ಲಿರುವ ಜೈಲೊಂದರಲ್ಲಿ ಇಡಲಾಗಿತ್ತು. ಅವರು ಪಂಜಾಬಿ ಮತ್ತು ಹಿಂದಿ ಮಾತನಾಡುವವರು.

ಅವರು ಮೆಕ್ಸಿಕೊ ಮೂಲಕ ಅಮೆರಿಕವನ್ನು ಎರಡು ವಾರಗಳ ಹಿಂದೆ ಅಕ್ರಮವಾಗಿ ಪ್ರವೇಶಿಸಿದ್ದರು. ಅಂದಿನಿಂದ ಅವರು ಬಂಧನದಲ್ಲೇ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News