ವೀಸಾ ಪಡೆಯುವ ಸುಲಭ ಪ್ರಕ್ರಿಯೆಯಿಂದ ಭಾರತೀಯರನ್ನು ಹೊರಗಿಟ್ಟದ್ದು ಸರಿಯಲ್ಲ: ಲಂಡನ್ ಮೇಯರ್ ಸಾದಿಕ್ ಖಾನ್

Update: 2018-06-24 17:07 GMT

ಲಂಡನ್, ಜೂ. 24: ವಿದ್ಯಾರ್ಥಿ ವೀಸಾ ಪಡೆಯುವ ಸುಲಭ ಪ್ರಕ್ರಿಯೆಯಿಂದ ಭಾರತೀಯರನ್ನು ಹೊರಗಿಟ್ಟ ಬ್ರಿಟನ್ ಸರಕಾರದ ಕ್ರಮ ‘ಆಕ್ಷೇಪಾರ್ಹ’ ಎಂದು ಲಂಡನ್ ಮೇಯರ್ ಸಾದಿಕ್ ಖಾನ್ ಹೇಳಿದ್ದಾರೆ.

ವಲಸೆಗೆ ಸಂಬಂಧಿಸಿದ ನೀತಿಗಳಲ್ಲಿ ಬದಲಾವಣೆ ಮಾಡುವಂತೆ ಕೋರಿ ಸರಕಾರದಲ್ಲಿ ಲಾಬಿ ಮಾಡುವುದನ್ನು ತಾನು ಮುಂದುವರಿಸುವುದಾಗಿಯೂ ಅವರು ಹೇಳಿದ್ದಾರೆ.

ಭಾರತೀಯರು ತಮ್ಮ ವೀಸಾ ಅವಧಿ ಮೀರಿ ಬ್ರಿಟನ್‌ನಲ್ಲಿ ಉಳಿದಿದ್ದಾರೆ ಎಂಬ ಬ್ರಿಟನ್ ಸರಕಾರದ ಹೇಳಿಕೆಯನ್ನು ತಳ್ಳಿ ಹಾಕಿರುವ ಅವರು, ಈ ಹೇಳಿಕೆಗಳಿಗೆ ಯಾವುದೇ ಪುರಾವೆಯಿಲ್ಲ ಎಂದಿದ್ದಾರೆ.

 ‘‘ಅಕ್ರಮ ವಲಸೆಯೊಂದಿಗೆ ವಿದ್ಯಾರ್ಥಿಗಳನ್ನು ತಳುಕು ಹಾಕುವುದು ಅತ್ಯಂತ ಆಕ್ಷೇಪಾರ್ಹವಾಗಿದೆ ಹಾಗೂ ಅದು ವಿಷಯವನ್ನು ಸಂಕೀರ್ಣಗೊಳಿಸುತ್ತದೆ. ವಲಸೆಗೆ ಪ್ರತಿಕೂಲ ವಾತಾವರಣ ಈಗಲೂ ಇದೆ. ಅದು ಬದಲಾಗುತ್ತದೆ ಎನ್ನುವುದನ್ನು ಸೂಚಿಸುವ ನೈಜ ಗಟ್ಟಿ ಪುರಾವೆಗಳು ನಮಗೆ ಬೇಕು’’ ಎಂದು ಶನಿವಾರ ಸಂಜೆ ಇಲ್ಲಿ ನಡೆದ ‘ಬ್ರಿಟನ್-ಭಾರತ ಪ್ರಶಸ್ತಿ ಪ್ರದಾನ’ದ ನೇಪಥ್ಯದಲ್ಲಿ ಮಾತನಾಡಿದ ಸಾದಿಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News