22 ಸಾವಿರ ಕೋಟಿ ರೂ.ಮೌಲ್ಯದ ಆಸ್ತಿ ಘೋಷಿಸಿದ ಸ್ವತಂತ್ರ ಅಭ್ಯರ್ಥಿ!

Update: 2018-06-24 17:17 GMT

ಇಸ್ಲಾಮಾಬಾದ್, ಜೂ. 24: ಪಾಕಿಸ್ತಾನದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸ್ವತಂತ್ರ ಅಭ್ಯರ್ಥಿಯೊಬ್ಬರು 40,300 ಕೋಟಿ ಪಾಕಿಸ್ತಾನಿ ರೂಪಾಯಿ (22,491 ಕೋಟಿ ಭಾರತೀಯ ರೂಪಾಯಿ) ಮೌಲ್ಯದ ಆಸ್ತಿಗಳನ್ನು ಘೋಷಿಸಿದ್ದಾರೆ.

ಮುಝಫ್ಫರ್‌ಘಡದಿಂದ ನ್ಯಾಶನಲ್ ಅಸೆಂಬ್ಲಿ ಮತ್ತು ಪ್ರಾಂತೀಯ ಅಸೆಂಬ್ಲಿಗಳಿಗೆ ಸ್ಪರ್ಧಿಸುತ್ತಿರುವ ಮುಹಮ್ಮದ್ ಹುಸೈನ್ ಶೇಖ್, ಮುಝಫ್ಫರ್‌ಘಡ ನಗರದ ಸುಮಾರು 40 ಶೇಕಡ ಜಮೀನು ತನ್ನ ಮಾಲೀಕತ್ವದಲ್ಲಿದೆ ಎಂದು ಹೇಳಿದ್ದಾರೆ. ಲಂಗ್ ಮಲನ, ತಲೀರಿ, ಚಕ್ ತಲೀರಿ ಮತ್ತು ಲಟ್ಕರನ್ ಪ್ರದೇಶಗಳಲ್ಲಿಯೂ ಅವರು ಜಮೀನು ಹೊಂದಿದ್ದಾರೆ.

ಪಾಕ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅತ್ಯಂತ ಶ್ರೀಮಂತ ಅಭ್ಯರ್ಥಿ ಅವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News