ಏಕದಿನ ಕ್ರಿಕೆಟ್: ಆಸ್ಟ್ರೇಲಿಯ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸಿದ ಇಂಗ್ಲೆಂಡ್

Update: 2018-06-24 18:36 GMT

ಮ್ಯಾಂಚೆಸ್ಟರ್, ಜೂ.24: ಜೋಸ್ ಬಟ್ಲರ್ ಅಜೇಯ ಶತಕದ(110,122 ಎಸೆತ, 12 ಬೌಂಡರಿ, 1 ಸಿಕ್ಸರ್) ನೆರವಿನಿಂದ ಇಂಗ್ಲೆಂಡ್ ತಂಡ ಆಸ್ಟ್ರೇಲಿಯ ವಿರುದ್ಧದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು 1 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಈ ಗೆಲುವಿನ ಮೂಲಕ 5 ಪಂದ್ಯಗಳ ಏಕದಿನ ಸರಣಿಯನ್ನು 5-0 ಅಂತರದಿಂದ ಗೆದ್ದುಕೊಂಡು ಕ್ಲೀನ್‌ಸ್ವೀಪ್ ಮಾಡಿದೆ.

ರವಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ ತಂಡ ಮೊಯಿನ್ ಅಲಿ(4-46) ಸ್ಪಿನ್ ಮೋಡಿಗೆ ಸಿಲುಕಿ 34.4 ಓವರ್‌ಗಳಲ್ಲಿ ಕೇವಲ 205 ರನ್‌ಗೆ ಆಲೌಟಾಯಿತು.

ಆಸೀಸ್ ಪರ ಹೆಡ್(56) ಅಗ್ರ ಸ್ಕೋರರ್ ಎನಿಸಿಕೊಂಡರು.

ಗೆಲ್ಲಲು ಸುಲಭ ಸವಾಲು ಪಡೆದ ಇಂಗ್ಲೆಂಡ್‌ಗೆ ಸ್ಟಾನ್‌ಲೇಕ್(3-35), ರಿಚರ್ಡ್‌ಸನ್(3-51) ಹಾಗೂ ಸ್ಟೋನಿಸ್(2-37) ಸವಾಲಾಗಿ ಪರಿಣಮಿಸಿದರು. ಅಜೇಯ 110 ರನ್ ಗಳಿಸಿದ ಬಟ್ಲರ್ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ 9 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News