ಸುಷ್ಮಾ ಸ್ವರಾಜ್ ಬಗ್ಗೆ ಕೀಳುಮಟ್ಟದ ಟ್ವೀಟ್ ಮಾಡಿದವರನ್ನು ಫಾಲೋ ಮಾಡುತ್ತಿರುವ 41 ಬಿಜೆಪಿ ಸಂಸದರು!

Update: 2018-06-26 10:28 GMT

ಹೊಸದಿಲ್ಲಿ, ಜೂ.26: ಪಾಸ್ ಪೋರ್ಟ್ ಅಧಿಕಾರಿಯೊಬ್ಬನಿಂದ ಕಿರುಕುಳಕ್ಕೊಳಗಾದ ಅಂತರ್ ಧರ್ಮೀಯ ದಂಪತಿಗೆ ಮರುದಿನವೇ ಪಾಸ್ ಪೋರ್ಟ್ ಒದಗಿಸಿ ಅಧಿಕಾರಿಯನ್ನು ವರ್ಗಾಯಿಸಲು ಕ್ರಮ ಕೈಗೊಂಡಂದಿನಿಂದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ವಿರುದ್ಧ ಬಿಜೆಪಿ ಬೆಂಬಲಿಗರೇ ದ್ವೇಷ ಕಾರುತ್ತಿದ್ದು, ಕೀಳುಮಟ್ಟದಲ್ಲಿ ಟೀಕಿಸುತ್ತಿದ್ದಾರೆ. ತಮ್ಮನ್ನು ನಿಂದಿಸಿ ಕೆಲವರು ಮಾಡಿರುವ ಸುಮಾರು 200ಕ್ಕೂ ಹೆಚ್ಚು ಟ್ವೀಟ್ ಗಳನ್ನು ಸುಷ್ಮಾ ಲೈಕ್ ಮಾಡಿ ಅವುಗಳನ್ನು ಜಗತ್ತೇ ನೋಡುವಂತೆ ಮಾಡಿದ್ದು, ಈಗಾಗಲೇ ಎಲ್ಲರಿಗೂ ತಿಳಿದ ಸಂಗತಿ. ಇದರಲ್ಲಿ ಅಚ್ಚರಿಯ  ವಿಚಾರವೇನೆಂದರೆ  ಕೆಲ ಸಚಿವರೂ ಸೇರಿದಂತೆ 41 ಮಂದಿ ಬಿಜೆಪಿ ಸಂಸದರು ಸುಷ್ಮಾರನ್ನು ನಿಂದಿಸಿ ಟ್ರೋಲ್ ಮಾಡಿದ ಕನಿಷ್ಠ ಒಂದು ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಎಂಟು ಖಾತೆಗಳನ್ನು ಫಾಲೋ ಮಾಡುತ್ತಿದ್ದಾರೆ ಎಂದು hindustantimes.com ವರದಿ ಮಾಡಿದೆ.

ಆದರೆ ಸುಷ್ಮಾರ ಕ್ಯಾಬಿನೆಟ್ ಸಹೋದ್ಯೋಗಿಗಳು ಹಾಗೂ ಕೆಲ ಪಕ್ಷದ ಸಂಸದರು ಈ ಖಾತೆಗಳನ್ನು ಫಾಲೋ ಮಾಡುತ್ತಿದ್ದಾರೆಂಬ ಮಾತ್ರಕ್ಕೆ ಸುಷ್ಮಾ ವಿರುದ್ಧದ ಟ್ವೀಟ್ ಅನ್ನು ಅವರು ಬೆಂಬಲಿಸುತ್ತಾರೆಂದು ಹೇಳಲು ಸಾಧ್ಯವಿಲ್ಲ. "ಪ್ರಧಾನಿ ಯಾವುದಾದರೂ ಒಂದು ಖಾತೆಯನ್ನು ಫಾಲೋ ಮಾಡುತ್ತಿದ್ದಾರೆಂದ ಮಾತ್ರಕ್ಕೆ ಆ ವ್ಯಕ್ತಿಯ ಸನ್ನಡತೆ ಪ್ರಮಾಣಪತ್ರ ಅದಾಗುವುದಿಲ್ಲ'' ಎಂದು ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವಿಯ ಈ ಹಿಂದೊಮ್ಮೆ ಹೇಳಿದ್ದರು.

ಸುಷ್ಮಾ ಅವರು ಲೈಕ್ ಮಾಡಿದ್ದ 211 ಟ್ವೀಟ್ ಗಳು 169 ಖಾತೆಗಳಿಂದ ಬಂದಿದ್ದು ಇವುಗಳಲ್ಲಿ 18 ಖಾತೆಗಳನ್ನು ಕನಿಷ್ಠ ಒಬ್ಬ ಬಿಜೆಪಿ ಸಂಸದ ಫಾಲೋ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News