ತರಗತಿಯಿಂದ ಹೊರಗೆಳೆದು ಪ್ರಾಧ್ಯಾಪಕರ ಮುಖಕ್ಕೆ ಮಸಿ ಬಳಿದ ಎಬಿವಿಪಿ ಕಾರ್ಯಕರ್ತರು

Update: 2018-06-27 13:21 GMT

ರಾಜ್ ಕೋಟ್, ಜೂ.27: ವಿಶ್ವವಿದ್ಯಾಲಯದ ಚುನಾವಣೆಯಲ್ಲಿ ತಾರತಮ್ಯ ಎಸಗಿದ್ದಾರೆ ಎಂದು ಆರೋಪಿಸಿ ಪ್ರಾಧ್ಯಾಪಕರೊಬ್ಬರಿಗೆ ಎಬಿವಿಪಿ ಸದಸ್ಯರು ಮಸಿ ಬಳಿದಿರುವ ಘಟನೆ ರಾಜ್ ಕೋಟ್ ನಲ್ಲಿ ನಡೆದಿದೆ.

ಇಲ್ಲಿನ ಕ್ರಾಂತಿಗುರು ಶಾಯ್ಮ್ ಜಿ ಕೃಷ್ಣ ವರ್ಮಾ ಕಚ್ಛ್ ಯುನಿವರ್ಸಿಟಿಯ ಪ್ರಾಧ್ಯಾಪಕ ಗಿರಿನ್ ಭಕ್ಷಿಯವರಿಗೆ ಎಬಿವಿಪಿ ಸದಸ್ಯರು ಮಸಿ ಬಳಿದಿದಿದ್ದಾರೆ ಎಂದು ಆರೋಪಿಸಲಾಗಿದೆ. ಗಿರಿನ್ ಭಕ್ಷಿಯವರು ಪಾಠ ನಡೆಸುತ್ತಿದ್ದ ವೇಳೆ ತರಗತಿಗೆ ನುಗ್ಗಿದ ಎಬಿವಿಪಿ ಕಾರ್ಯಕರ್ತರ ಗುಂಪೊಂದು ಅವರನ್ನು ಹೊರಗೆಳೆದು ಮುಖಕ್ಕೆ ಮಸಿ ಬಳಿದಿದೆ ಎಂದು ಯುನಿವರ್ಸಿಟಿಯ ಉಪ ಕುಲಪತಿ ಚಂದ್ರಸಿಂಹ ಜಡೇಜ ಆರೋಪಿಸಿದ್ದಾರೆ. ಇಷ್ಟೇ ವಿವಿ ರಿಜಿಸ್ಟ್ರಾರ್ ಚೇಂಬರ್ ವರೆಗೂ ಭಕ್ಷಿಯವರನ್ನು ಮೆರವಣಿಗೆ ಮಾಡಿ ಒಂದು ಗಂಟೆಗೂ ಅಧಿಕ ಕಾಲ ತನಗೆ ಘೇರಾವ್ ಹಾಕಿದ್ದಾರೆ ಎಂದ ಉಪಕುಲಪತಿ ಆರೋಪಿಸಿದ್ದಾರೆ.

"ಎಬಿವಿಪಿ ಸಲ್ಲಿಸಿದ್ದ ಮತದಾರ ನೋಂದಣಿ ನಮೂನೆಗಳನ್ನು ಭಕ್ಷಿ ತಿರಸ್ಕರಿಸಿದ್ದರು. ಆದರೆ ಈ ಆರೋಪಗಳು ಸುಳ್ಳೆಂದು ಸಾಬೀತಾಗಿದೆ. ನಿಯಮದ ಪ್ರಕಾರ ಎಲ್ಲರೂ ಸಲ್ಲಿಸಿದ ನಮೂನೆಗಳನ್ನು ತಿರಸ್ಕರಿಸಲಾಗಿದೆ. ಈ ವಿಚಾರದ ಬಗ್ಗೆ ಮಂಗಳವಾರ ಮಾತನಾಡಲಾಗುವುದು ಎಂದು ನಿರ್ಧರಿಸಿದ್ದೆವು. ಆದರೆ ಎಬಿವಿಪಿ ಕಾರ್ಯಕರ್ತರು ಆಕ್ರಮಣಕಾರಿಯಾಗಿ ವರ್ತಿಸಿದರು." ಎಂದವರು ಹೇಳಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News