×
Ad

ದ್ವೇಷಕಾರುವ ಶಕ್ತಿಗಳು ಜನರ ಬಳಿ ಸುಳಿಯಲು ಭಾರತ ಎಂದಿಗೂ ಅನುಮತಿಸುವುದಿಲ್ಲ: ಸುಷ್ಮಾ ಸ್ವರಾಜ್

Update: 2018-06-27 19:15 IST

ಹೊಸದಿಲ್ಲಿ, ಜೂ.27: ತನ್ನ ದೇಶದ ನಾಗರಿಕರ ಬಳಿಗೆ 'ದ್ವೇಷ ಕಾರುವ ಹಾಗು ಹಿಂಸೆ'ಯ ಶಕ್ತಿಗಳು ಸುಳಿಯಲು ಭಾರತ ಎಂದಿಗೂ ಅನುಮತಿಸುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ವಿವಿಧ ದೇಶಗಳ ರಾಯಭಾರಿಗಳಿಗಾಗಿ ಏರ್ಪಡಿಸಿದ್ದ ಈದ್ ಔತಣಕೂಟದಲ್ಲಿ ಮಾತನಾಡಿದ ಅವರು, ದೀಪಾವಳಿ, ಈದುಲ್ ಫಿತ್ರ್ ಅಥವಾ ಕ್ರಿಸ್ ಮಸ್ ನಂತಹ ಧಾರ್ಮಿಕ ಹಬ್ಬಗಳು ಹಲವು ನಂಬಿಕೆಗಳ ಜನರನ್ನು ಒಂದುಗೂಡಿಸುತ್ತದೆ ಎಂದು ಹೇಳಿದರು.

"ಅತಿದೊಡ್ಡ ಜನಸಂಖ್ಯೆಯಾಗಿರುವ ಮುಸ್ಲಿಮರಿಗೆ ಭಾರತವು ತವರಾಗಿದೆ. ಪ್ರದೇಶಗಳು, ಭಾಷೆಗಳು, ಸಂಪ್ರದಾಯಗಳು ಹಾಗು ಆಹಾರಗಳಂತೆ ನಮ್ಮ ಈದ್ ಆಚರಣೆಯೂ ವೈವಿಧ್ಯಮಯವಾಗಿದೆ" ಎಂದವರು ಹೇಳಿದರು.

ಪ್ರವಾದಿಗಳು ಹೇಳಿರುವಂತೆ ನಮ್ಮ ನಂಬಿಕೆ, ಶ್ರದ್ಧೆಗಳನ್ನು ನೈಜ ರೀತಿಯಲ್ಲಿ ಪಾಲಿಸಬೇಕು . ಸಹಾನುಭೂತಿ, ಕರುಣೆ ಮತ್ತು ಸಹಿಷ್ಣುತೆ ಇತ್ಯಾದಿ ಜೀವನವೌಲ್ಯಗಳನ್ನು ಮಿಲಿಯಾಂತರ ಮುಸ್ಲಿಮರು ಹಾಗೂ ಮುಸ್ಲಿಮೇತರರು ವಿಶ್ವದಾದ್ಯಂತ ಪಸರಿಸಿದ್ದಾರೆ. ಈ ವೌಲ್ಯಗಳು ನಮ್ಮ ಉತ್ತಮ ಭವಿಷ್ಯಕ್ಕೆ ಅತ್ಯಗತ್ಯವಾಗಿದೆ ಎಂದರು.

 ಕಳೆದ ಎಪ್ರಿಲ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಜೋರ್ಡಾನ್‌ನ ದೊರೆ ತನ್ನ ಭಾಷಣದಲ್ಲಿ ತಿಳಿಸಿರುವಂತೆ, ಇಡೀ ವಿಶ್ವವೇ ನಮ್ಮ ಕುಟುಂಬವಾಗಿದೆ. ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆ ನಮ್ಮ ಸ್ವಭಾವದಲ್ಲಿ ಸಮ್ಮಿಳಿತವಾಗಿದೆ ಎಂದು ಸುಷ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News