ಮೊದಲ ಟ್ವೆಂಟಿ-20: ಭಾರತ 208/ 5
Update: 2018-06-27 22:18 IST
ಡುಬ್ಲಿನ್, ಜೂ.27: ಐರ್ಲೆಂಡ್ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 208 ರನ್ ಗಳಿಸಿದೆ.
ಭಾರತದ ಆರಂಭಿಕ ದಾಂಡಿಗರಾದ ರೋಹಿತ್ ಶರ್ಮಾ 97 ರನ್ (61ಎ, 8ಬೌ,5ಸಿ) ಮತ್ತು ಶಿಖರ್ ಧವನ್ 74ರನ್(45ಎ, 5ಬೌ,5ಸಿ) ಗಳಿಸಿದರು. ಇವರು ಮೊದಲ ವಿಕೆಟ್‌ಗೆ 160 ರನ್‌ಗಳ ಜೊತೆಯಾಟ ನೀಡಿದರು.
ವಿಕೆಟ್ ಕೀಪರ್ ಎಂಎಸ್ ಧೋನಿ 11ರನ್, ಸುರೇಶ್ ರೈನಾ 10ರನ್, ಹಾರ್ದಿಕ್ ಪಾಂಡ್ಯ ಔಟಾಗದೆ 6 ರನ್ ಗಳಿಸಿದರು. ನಾಯಕ ವಿರಾಟ್ ಕೊಹ್ಲಿ (0)ಖಾತೆ ತೆರೆಯದೆ ನಿರ್ಗಮಿಸಿದರು.
ಐರ್ಲೆಂಡ್ ತಂಡದ ಚೇಸ್ 35ಕ್ಕೆ 4 ವಿಕೆಟ್ ಪಡೆದರು.