ಚೀನಾ ಸೇನಾಧಿಕಾರಿ ಶೀಘ್ರ ಭಾರತ ಭೇಟಿ

Update: 2018-06-28 17:17 GMT

ಬೀಜಿಂಗ್, ಜೂ. 28: ಚೀನಾ ಸೇನಾಧಿಕಾರಿ ಮೇಜರ್ ಜನರಲ್ ಲಿಯು ಕ್ಸಿಯಾವೊವು ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಚೀನಾ ರಕ್ಷಣಾ ಸಚಿವಾಲಯ ಗುರುವಾರ ತಿಳಿಸಿದೆ.

ಚೀನಾ ಮತ್ತು ಭಾರತಗಳ ನಡುವಿನ ಉದ್ವಿಗ್ನತೆ ನಿವಾರಿಸುವ ಉದ್ದೇಶದಿಂದ ಉಭಯ ದೇಶಗಳ ನಾಯಕರ ನಡುವೆ ಇತ್ತೀಚೆಗೆ ನಡೆದ ಶೃಂಗಸಮ್ಮೇಳನದ ಬಳಿಕ, ಈ ಬೆಳವಣಿಗೆ ನಡೆದಿದೆ.

ಉಭಯ ದೇಶಗಳ ನಡುವೆ ಹೊಸ ಬಾಂಧವ್ಯವನ್ನು ಆರಂಭಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಾತುಕತೆ ನಡೆಸಿದ್ದರು.

ಚೀನಾದ ಪಶ್ಚಿಮ ಮಿಲಿಟರಿ ವಲಯದ ಉಪ ಕಮಾಂಡರ್ ಆಗಿರುವ ಮೇಜರ್ ಜನರಲ್ ಲಿಯು ಕ್ಸಿಯಾವೊವು ಶೀಘ್ರದಲ್ಲೇ ಭಾರತ ಮತ್ತು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಂಗಳ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ವು ಕಿಯನ್ ತಿಳಿಸಿದರು.

ಜಗತ್ತಿನಲ್ಲಿ ಗೊಂದಲ ಸೃಷ್ಟಿಸುವ ಉದ್ದೇಶ ಚೀನಾಕ್ಕಿಲ್ಲ. ಚೀನಾದ ಜನತೆ ಬಲಿಷ್ಠ ಸಮಾಜವಾದಿ ಆಧುನಿಕ ದೇಶವೊಂದನ್ನು ನಿರ್ಮಿಸಲು ಬಯಸಿದ್ದಾರೆ. ಆದರೆ, ಇದಕ್ಕಾಗಿ ನಾವು ಶಾಂತಿಯ ಮಾರ್ಗವನ್ನು ಅನುಸರಿಸುತ್ತೇವೆ. ನಾವು ಸಾಮ್ರಾಜ್ಯ ವಿಸ್ತರಣೆ ಮತ್ತು ವಸಾಹತುಶಾಹಿ ಧೋರಣೆಯನ್ನು ಹೊಂದಿಲ್ಲ.

ಕ್ಸಿ ಜಿನ್‌ಪಿಂಗ್, ಚೀನಾ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News