ಟಿಬೆಟ್‌ನಲ್ಲಿ ಸೇನೆ-ನಾಗರಿಕ ಬಾಂಧವ್ಯಕ್ಕಾಗಿ ಸೇನಾಭ್ಯಾಸ

Update: 2018-06-29 17:37 GMT

ಬೀಜಿಂಗ್, ಜೂ. 29: ಟಿಬೆಟ್‌ನಲ್ಲಿ ನಿಯೋಜನೆಗೊಂಡಿರುವ ಚೀನಾ ಸೇನೆಯು ತನ್ನ ಸರಕು ಪೂರೈಕೆ, ಶಸ್ತ್ರಾಸ್ತ್ರ ಬೆಂಬಲ ಸಾಮರ್ಥ್ಯ ಮತ್ತು ಸೇನೆ-ನಾಗರಿಕ ಬಾಂಧವ್ಯವನ್ನು ಪರೀಕ್ಷಿಸುವ ಉದ್ದೇಶದಿಂದ ದೂರದ ಹಿಮಾಲಯ ವಲಯದಲ್ಲಿ ಯುದ್ಧಾಭ್ಯಾಸ ನಡೆಸಿದೆ ಎಂದು ಸರಕಾರಿ ಒಡೆತನದ ‘ಗ್ಲೋಬಲ್ ಟೈಮ್ಸ್’ ಶುಕ್ರವಾರ ವರದಿ ಮಾಡಿದೆ.

ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯ ಘಟಕಗಳು ಮಂಗಳವಾರ ನಡೆಸಿದ ಅಭ್ಯಾಸವು, ಡೋಕಾ ಲಾ ಬಿಕ್ಕಟ್ಟಿನ ಬಳಿಕ ನಡೆದ ಇಂಥ ಮೊದಲ ಅಭ್ಯಾಸವಾಗಿದೆ.

ಇದಕ್ಕೂ ಮೊದಲು, ಪಿಎಲ್‌ಎಯು ಕಳೆದ ವರ್ಷ ಆಗಸ್ಟ್‌ನಲ್ಲಿ 4,600 ಮೀಟರ್ ಎತ್ತರದಲ್ಲಿ 13 ತಾಸುಗಲ ಯುದ್ಧಾಭ್ಯಾಸ ನಡೆಸಿತ್ತು ಎಂದು ಪತ್ರಿಕೆ ವರದಿ ಮಾಡಿದೆ.

ಹೊಸ ಯುಗದಲ್ಲಿ ಬಲಿಷ್ಠ ಸೇನೆಯೊಂದನ್ನು ಕಟ್ಟುವ ದೇಶದ ಗುರಿಯನ್ನು ಸಾಕ್ಷಾತ್ಕರಿಸುವುದಕ್ಕಾಗಿ ಸೇನಾ-ನಾಗರಿಕ ಬಾಂಧವ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ತೆಗೆದುಕೊಂಡ ಮಹತ್ವದ ಕ್ರಮ ಇದಾಗಿದೆ ಎಂದು ವಿಶ್ಲೇಷಕರು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News