ಬಾಲಿ ಜ್ವಾಲಾಮುಖಿ ಮತ್ತೆ ಸ್ಫೋಟ

Update: 2018-06-29 17:39 GMT

ಜಕಾರ್ತ (ಇಂಡೋನೇಶ್ಯ), ಜೂ. 29: ಇಂಡೋನೇಶ್ಯದ ರಿಸಾರ್ಟ್ ದ್ವೀಪ ಬಾಲಿಯಲ್ಲಿರುವ ಜ್ವಾಲಾಮುಖಿ ಶುಕ್ರವಾರ ಸ್ಫೋಟಗೊಂಡಿದ್ದು, ದಟ್ಟ ಬೂದಿ ಮತ್ತು ಹೊಗೆ ಆಕಾಶಕ್ಕೆ ಹಲವು ಕಿಲೋಮೀಟರ್ ಎತ್ತರಕ್ಕೆ ಚಿಮ್ಮಿದೆ.

ಇದರಿಂದಾಗಿ ಶುಕ್ರವಾರ ಮುಂಜಾನೆಯಿಂದಲೇ ನಗುರಾ ರೈ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದ್ದು, ಸಾವಿರಾರು ಪ್ರವಾಸಿಗರು ಸಿಕ್ಕಿಹಾಕಿಕೊಂಡಿದ್ದಾರೆ.

ವಿಮಾನ ನಿಲ್ದಾಣ ಮುಚ್ಚುಗಡೆಯಿಂದಾಗಿ ಹೋಗುವ ಹಾಗೂ ಬರುವ ಸುಮಾರು 450 ವಿಮಾನಗಳನ್ನು ರದ್ದುಪಡಿಸಲಾಗಿದೆ.

ಶುಕ್ರವಾರ ಮುಂಜಾನೆ ಜ್ವಾಲಾಮುಖಿಯ ಮೇಲೆ 23,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನ ಚಾಲಕನೊಬ್ಬ ಜ್ವಾಲಾಮುಖಿ ಬೂದಿಯ ಅಂಶಗಳನ್ನು ಪತ್ತೆಹಚ್ಚಿದ ಬಳಿಕ ವಿಮಾನ ನಿಲ್ದಾಣವನ್ನು ಮುಚ್ಚಲಾಯಿತು.

ಬೂದಿಯು ವಿಮಾನ ಹಾರಾಟಕ್ಕೆ ಅಪಾಯಕಾರಿಯಾಗಿದೆ. ಬೂದಿಯು ರನ್‌ವೇ ಜಾರುವಂತೆ ಮಾಡುತ್ತದೆಯಲ್ಲದೆ, ವಿಮಾನದ ಇಂಜಿನ್‌ಗಳು ಬೂದಿಯನ್ನು ಒಳಕ್ಕೆ ಎಳೆದುಕೊಳ್ಳುವ ಅಪಾಯವಿರುತ್ತದೆ.

12 ಗಂಟೆ ಬಳಿಕ ತೆರೆದ ವಿಮಾನ ನಿಲ್ದಾಣ

ಬಾಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸುಮಾರು 12 ಗಂಟೆಗಳ ಕಾಲ ಮುಚ್ಚಿದ ಬಳಿಕ, ಶುಕ್ರವಾರ ಅಪರಾಹ್ನ ತೆರೆದಿದೆ.

ವಿಮಾನ ನಿಲ್ದಾಣ ಮುಚ್ಚಿದ ಹಿನ್ನೆಲೆಯಲ್ಲಿ ಸುಮಾರು 75,000 ಪ್ರವಾಸಿಗರು ಸಿಕ್ಕಿ ಹಾಕಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News