ಟ್ರಂಪ್ ವಲಸೆ ನೀತಿ ವಿರುದ್ಧ ಅಮೆರಿಕದಲ್ಲಿ ಲಕ್ಷಾಂತರ ಮಂದಿಯಿಂದ ಪ್ರತಿಭಟನೆ

Update: 2018-07-01 17:47 GMT

ವಾಶಿಂಗ್ಟನ್, ಜು. ೧: ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ವಲಸೆ ನೀತಿಗಳನ್ನು ವಿರೋಧಿಸಿ ಅಮೆರಿಕದಾದ್ಯಂತ ಶನಿವಾರ ಲಕ್ಷಾಂತರ ಮಂದಿ ಪ್ರತಿಭಟನೆ ನಡೆಸಿದರು. ಅಮೆರಿಕ-ಮೆಕ್ಸಿಕೊ ಗಡಿಯಲ್ಲಿ ವಲಸಿಗರಿಂದ ಅವರ ಮಕ್ಕಳನ್ನು ಬೇರ್ಪಡಿಸಿರುವ ಕ್ರಮವನ್ನು ಅವರು ಖಂಡಿಸಿದರು.

ನ್ಯೂಯಾರ್ಕ್ ಮತ್ತು ಲಾಸ್ ಏಂಜಲಿಸ್ ಮುಂತಾದ ವಲಸಿಗ ಸ್ನೇಹಿ ನಗರಗಳಿಂದ ಹಿಡಿದು ಆ್ಯಪಲಕಿಯ ಮತ್ತು ವ್ಯೋಮಿಂಗ್ ಮುಂತಾದ ಕನ್ಸರ್ವೇಟಿವ್ ನಗರಗಳವರೆಗೆ ಪ್ರತಿಭಟನಕಾರರು 700 ಕ್ಕೂ ಅಧಿಕ ಮೆರವಣಿಗೆಗಳನ್ನು ಏರ್ಪಡಿಸಿದರು.

ಟೆಕ್ಸಾಸ್ ರಾಜ್ಯದ ಮ್ಯಾಕಲನ್‌ನಲ್ಲಿ ವಲಸಿಗ ಮಕ್ಕಳನ್ನು ಇಡಲಾಗಿರುವ ಬಂಧನ ಕೇಂದ್ರದ ಸಮೀಪದ ಗಡಿ ಗಸ್ತು ಠಾಣೆಯ ಎದುರು ಹಾಗೂ ಅಧ್ಯಕ್ಷರು ವಾರಾಂತ್ಯವನ್ನು ಕಳೆಯುತ್ತಿರುವ ನ್ಯೂಜರ್ಸಿಯ ಬೆಡ್‌ಮಿನ್‌ಸ್ಟರ್‌ನಲ್ಲಿರುವ ಟ್ರಂಪ್‌ರ ಗಾಲ್ಫ್ ರಿಸಾರ್ಟ್ ಸಮೀಪದ ರಸ್ತೆಯ ಮೂಲೆಯಲ್ಲಿ ಪ್ರತಿಭಟನಕಾರರು ಪ್ರತಿಭಟಿಸಿದರು.

ಟ್ರಂಪ್‌ರ ‘ಅಕ್ರಮ ವಲಸೆಗೆ ಶೂನ್ಯ ಸಹನೆ’ ನೀತಿಯನ್ವಯ 2,೦೦೦ ಕ್ಕೂ ಅಧಿಕ ಮಕ್ಕಳನ್ನು ಅವರ ಹೆತ್ತವರಿಂದ ಬೇರ್ಪಡಿಸಿ ಬಂಧನ ಕೇಂದ್ರಗಳಲ್ಲಿ ಇಡಲಾಗಿದೆ.

ಈಗಾಗಲೇ ಬೇರ್ಪಡಿಸಿರುವ ಕುಟುಂಬಗಳನ್ನು ಶೀಘ್ರವೇ ಮತ್ತೆ ಒಂದುಗೂಡಿಸುವಂತೆ ಪ್ರತಿಭಟನಕಾರರು ಸರಕಾರವನ್ನು ಒತ್ತಾಯಿಸಿದ್ದಾರೆ.

ವಾಶಿಂಗ್ಟನ್‌ನಲ್ಲಿ ಶ್ವೇತಭವನದ ಎದುರಿನಲ್ಲಿರುವ ಲಫಯೆಟ್ ಪಾರ್ಕ್‌ನಲ್ಲಿ ಸುಮಾರು 2೦,೦೦೦ ಪ್ರತಿಭಟನಕಾರರು ಜಮಾಯಿಸಿದ್ದರು. ಅವರು ಸುಡುವ ಬಿಸಿಲನ್ನು ಲೆಕ್ಕಿಸದೆ ಹಲವು ಗಂಟೆಗಳ ಕಾಲ ಪ್ರತಿಭಟಿಸಿದರು.

ಟ್ರಂಪ್ ವಲಸೆ ನೀತಿ ವಿರುದ್ಧ ಅಮೇರಿಕದಲ್ಲಿ ಲಕ್ಷಾಂತರ ಮಂದಿಯಿಂದ ಪ್ರತಿಭಟನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News