×
Ad

ಶೀಘ್ರದಲ್ಲೇ ಸೇನೆಗೆ ಅಗ್ನಿ V ಸೇರ್ಪಡೆ

Update: 2018-07-01 23:00 IST

ಹೊಸದಿಲ್ಲಿ, ಜು.1: ಭಾರತವು ತನ್ನ ಖಂಡಾಂತರ ಪ್ರಕ್ಷೇಪಕ ಕ್ಷಿಪಣಿ (ಐಸಿಬಿಎಂ)ಯ ಪ್ರಥಮ ಸಮೂಹವಾದ ಅಗ್ನಿ Vಅನ್ನು ಸೇನೆಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ. ಭಾರತವು ಚೀನಾದಾದ್ಯಂತದ ಗುರಿಗಳನ್ನು ತನ್ನ ಕ್ಷಿಪಣಿಯ ವ್ಯಾಪ್ತಿಯೊಳಗೆ   ತರಲು ಇದರಿಂದ ಸಾಧ್ಯವಾಗಲಿದೆ. ಅಗ್ನಿ V  ರ ಸೇರ್ಪಡೆಯೊಂದಿಗೆ ದೇಶದ ಮಿಲಿಟರಿ ಸಾಮರ್ಥ್ಯದಲ್ಲಿ ಗಣನೀಯ ವೃದ್ಧಿಯಾಗಲಿದೆ.

 V 5 ಸಾವಿರ ಕಿ.ಮೀ.ದೂರದವರೆಗೂ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿ ವ್ಯವಸ್ಥೆಯು, ಅಣ್ವಸ್ತ್ರ ಸಿಡಿತಲೆಗಳನ್ನು ಕೂಡಾ ಒಯ್ಯುವ ಸಾಮರ್ಥ್ಯ ವುಳ್ಳದ್ದಾಗಿದೆ. ಅಗ್ನಿ ಕ್ಷಿಪಣಿಯು ಭೂಸೇನೆಯ ವ್ಯೆಹಾತ್ಮಕ ಪಡೆಗಳ ಕಮಾಂಡ್ (ಎಸ್‌ಎಫ್‌ಸಿ) ಘಟಕಕ್ಕೆ ಸೇರ್ಪಡೆಗೊಳ್ಳಲಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.

ಬೀಜಿಂಗ್, ಶಾಂಘೈ, ಗುವಾಂಗ್‌ಝೌ ಹಾಗೂ ಹಾಂಕಾಂಗ್‌ನಂತಹ ಚೀನಾದ ಪ್ರಮುಖ ನಗರಗಳು ಕ್ಷಿಪಣಿಯ ವ್ಯಾಪ್ತಿಗೆ ಬರಲಿವೆ. ಕಳೆದ ತಿಂಗಳು ಅಗ್ನಿ V  ಕ್ಷಿಪಣಿಯನ್ನು ಒಡಿಶಾದ ಕರಾವಳಿಯಲ್ಲಿ ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿತ್ತು. ಸೇನೆಗೆ ಸೇರ್ಪಡೆಗೊಳಿಸುವ ಪೂರ್ವಭಾವಿಯಾಗಿ ಮುಂದಿನ ಕೆಲವು ವಾರಗಳಲ್ಲಿ ಇನ್ನೂ ಕೆಲವು ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆಗಳ ನಡೆಯಲಿದೆಯೆಂದು ಮೂಲಗಳು ತಿಳಿಸಿವೆ.

  ಅಮೆರಿಕ, ಚೀನಾ, ರಶ್ಯ, ಫ್ರಾನ್ಸ್ ಹಾಗೂ ಉತ್ತರ ಕೊರಿಯ ಸೇರಿದಂತೆ ಕೆಲವೇ ಕೆಲವು ರಾಷ್ಟ್ರಗಳು ಮಾತ್ರವೇ ಖಂಡಾಂತರ ಕ್ಷಿಪಣಿಗಳನ್ನು ಹೊಂದಿವೆ. ಪ್ರಸ್ತುತ ಭಾರತದಲ್ಲಿರುವ ಕ್ಷಿಪಣಿಗಳ ಪೈಕಿ ಆಗ್ನಿ1- 700 ಕಿ.ಮೀ, ಅಗ್ನಿ 2- 2 ಸಾವಿರ ಕಿ.ಮೀ., ಅಗ್ನಿ3- 2 ಸಾವಿರ ಕಿ.ಮೀ, ಅಗ್ನಿ-3 ಹಾಗೂ ಅಗ್ನಿ-4 2500 ಕಿ.ಮೀ.ರಿಂದ 3500 ಕಿ.ಮೀ. ವ್ಯಾಪ್ತಿಯನ್ನು ಹೊಂದಿವೆ.

  ಅಗ್ನಿ-5 ಕ್ಷಿಪಣಿಯ ಚೊಚ್ಚಲ ಪ್ರಾಯೋಗಿಕ ಪರೀಕ್ಷೆಯನ್ನು 2012ರ ಎಪ್ರಿಲ್ 19ರಂದು ನಡೆಸಲಾಗಿತ್ತು. 2013ರ ಸೆಪ್ಟೆಂಬರ್ 15ರಂದು ದ್ವಿತೀಯ ಹಾಗೂ 2015ರ ಜನವರಿ 31ರಂದು ನಾಲ್ಕನೆ ಹಾಗೂ 2016ರ ಡಿಸೆಂಬರ್ 26ರಂದುತ ನಾಲ್ಕನೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿತ್ತು. ಐದನೆ ಪರೀಕ್ಷೆ ಈ ವರ್ಷದ ಜನವರಿ 18ರಂದು ನಡೆದಿದ್ದು ಎಲ್ಲವೂ ಯಶಸ್ವಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News