ಮಂದ್‌ಸೌರ್ ಸಾಮೂಹಿಕ ಅತ್ಯಾಚಾರ ತನಿಖೆಗೆ ವಿಶೇಷ ತಂಡ ರಚನೆ
Update: 2018-07-01 23:14 IST
ಮಂದ್‌ಸೌರ್, ಜು. 1: ಎಂಟು ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ ರೂಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
''ಅತ್ಯಧಿಕ ಪ್ರಾಮುಖ್ಯತೆ ನೀಡಿ ನಾವು ಈ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಎರಡನೇ ಆರೋಪಿಯನ್ನು ಪೊಲೀಸ್ ರಿಮಾಂಡ್‌ಗೆ ಒಪ್ಪಿಸಲಾಗಿದೆ.'' ಎಂದು ಮಂದ್‌ಸೌರ್‌ನ ಮುಖ್ಯ ಪೊಲೀಸ್ ಅಧೀಕ್ಷಕ ರಾಕೇಶ್ ಮೋಹನ್ ಶುಕ್ಲಾ ಹೇಳಿದ್ದಾರೆ.
ಅಪರಾಧಿಗೆ ಮರಣದಂಡನೆ ವಿಧಿಸಬೇಕು ಎಂದು ಮಂದ್‌ಸೌರ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ತಂದೆ ಆಗ್ರಹಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು, ನನ್ನ ಪುತ್ರಿಗೆ ನ್ಯಾಯ ಸಿಗಬೇಕಾಗದರೆ ಅಪರಾಧಿಗೆ ಮರಣದಂಡನೆ ವಿಧಿಸಬೇಕು ಎಂದಿದ್ದಾರೆ.