ರಾಜಕೀಯ ಸ್ವಾರ್ಥಕ್ಕಾಗಿ ಧರ್ಮದ ಮುಖವಾಡ
ಪ್ರಸಕ್ತ ಕಾಲದ ಚಲನಚಿತ್ರಗಳು ಮುಸ್ಲಿಂ ಪಾತ್ರಗಳನ್ನು ಭಯೋತ್ಪಾದಕರು- ತೀವ್ರವಾದಿಗಳೆಂದು ಬಿಂಬಿಸುವ ಕಥಾವಸ್ತುಗಳಿಂದ ತುಂಬಿವೆ. ಕ್ವಾಂಟಿಕೊ ಸರಣಿಯ ಎಪಿಸೋಡ್ ಒಂದರಲ್ಲಿ ಹಿಂದೂ ಪಾತ್ರವೊಂದನ್ನು ದುಷ್ಟನೆಂಬಂತೆ ಬಿಂಬಿಸಿದ್ದರಿಂದ, ನಟಿಗೆ ಬೆದರಿಕೆಯೊಡ್ಡಲಾಯಿತಲ್ಲದೆ, ಆಕೆಯ ಪೌರತ್ವವನ್ನು ರದ್ದುಪಡಿಸುವಂತೆ ಆಗ್ರಹಿಸಲಾಯಿತು. ಹಿಂಸೆಯ ಯಾವುದೇ ಕೃತ್ಯಕ್ಕೂ ಧರ್ಮದ ಹಣೆಪಟ್ಟಿಯನ್ನು ಕಟ್ಟುವುದು, 9/11ರ ಅವಳಿ ಕಟ್ಟಡ ದುರಂತದ ಬಳಿಕ ಒಂದು ಟ್ರೆಂಡ್ ಆಗಿ ಪರಿಣಮಿಸಿದೆ.
ಸಮಕಾಲೀನ ಯುಗದಲ್ಲಿ ರಾಜಕೀಯವು ಅನೇಕ ಸಲ, ಧರ್ಮದ ವೇಷ ಧರಿಸುತ್ತದೆ. ಅದು ತೈಲ ಸಂಪತ್ತನ್ನು ನಿಯಂತ್ರಿಸಲು ಸಾಮ್ರಾಜ್ಯಶಾಹಿ ದೇಶಗಳು ನಡೆಸುವ ಜಾಗತಿಕ ಮಟ್ಟದ ರಾಜಕೀಯ ವಾಗಿರಬಹುದು ಅಥವಾ ಜನನ ಆಧಾರಿತ ಅಸಮಾನತೆಯನ್ನು ಆಧರಿಸಿದ ರಾಜಕೀಯ ವೌಲ್ಯಗಳ ಮರಳಿ ಹೇರುವ ರಾಜಕೀಯವಾಗಿ ರಬಹುದು, ಅವುಗಳಿಗೆಲ್ಲಾ ಧರ್ಮವು ಹೊದಿಕೆಯಾಗಿ ಬಿಟ್ಟಿದೆ. ಪಾಕಿಸ್ತಾನ ಹಾಗೂ ಹಲವಾರು ಪಶ್ಚಿಮ ಏಶ್ಯ ರಾಷ್ಟ್ರಗಳಲ್ಲಿ,ಧರ್ಮದ ಹೆಸರಿನಲ್ಲಿ ಊಳಿಗಮಾನ್ಯ-ಸರ್ವಾಧಿಕಾರವು ಅಸ್ತಿತ್ವದಲ್ಲಿದೆ ಹಾಗೂ ಅದು ಇನ್ನಷ್ಟು ಬಲಿಷ್ಠವಾಗುತ್ತಿದೆ. ಮ್ಯಾನ್ಮಾರ್-ಶ್ರೀಲಂಕಾದಲ್ಲಿ ಬೌದ್ಧ ಧರ್ಮವು ರಾಜಕೀಯಕ್ಕೆ ಪೋಷಾಕು ಆಗಿದೆ. ಭಾರತದಲ್ಲಿ, ಹಿಂದುತ್ವದ ಹಣೆಪಟ್ಟಿ ಧರಿಸಿ ರಾಜಕೀಯ ಮಾಡಲಾಗುತ್ತಿದೆ. ಸಮಾನತೆ ಹಾಗೂ ಉದಾರೀಕರಣದ ವೌಲ್ಯಗಳನ್ನು ಹೊಸಕಿಹಾಕಲು ಅದನ್ನು ದುರ್ಬಳಕೆ ಮಾಡಲಾಗುತ್ತಿದೆ. ಅನೇಕ ಸಂದರ್ಭಗಳಲ್ಲಿ ವರ್ಗೀಯ ರಾಜಕಾರಣದ ಇಂತಹ ಕೃತ್ಯಗಳು ಸೃಜನಶೀಲ ವ್ಯಕ್ತಿಗಳ ಮೇಲೆ ಗಂಭೀರ ಪರಿಣಾಮ ವನ್ನು ಬೀರುತ್ತದೆ ಹಾಗೂ ಕೋಮುವಾದಿಗಳಿಂದ ಅವರ ಗಜಲ್ ಗೋಷ್ಠಿ ಗಳಿಗೆ ಅಡಚಣೆಯುಂಟು ಮಾಡಲಾಗುತ್ತಿದೆ, ಅವರ ಚಲನಚಿತ್ರಗಳಿಗೆ ನಿಷೇಧ ಹೇರಲಾಗುತ್ತಿದೆ ಹಾಗೂ ಗಲಭೆಕೋರರ ದಾಳಿಗೊಳಗಾಗು ತ್ತವೆ. ಹಲವಾರು ಸಲ ಅವರಿಗೆ ಎಚ್ಚರಿಕೆಗಳನ್ನು ನೀಡಲಾಗುತ್ತದೆ ಹಾಗೂ ಧರ್ಮ ಹಾಗೂ ರಾಷ್ಟ್ರೀಯವಾದದ ಭಾವನೆಗಳಿಗೆ ನೋವುಂಟುಮಾಡಿದ್ದಕ್ಕಾಗಿ ಅವರಿಗೆ ಕ್ಷಮೆ ಯಾಚಿಸಲಾಗುತ್ತದೆ.
ಅಮೆರಿಕದ ಟಿವಿ ವಾಹಿನಿಯೊಂದರ ಧಾರಾವಾಹಿಯಲ್ಲಿ ನಟಿಸು ತ್ತಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ಇದೇ ಕಾರಣಗ ಳಿಂದಾಗಿ ಸುದ್ದಿಯಲ್ಲಿದ್ದಾರೆ (ಜೂನ್ 2018). ಈ ಸರಣಿಯ ಒಂದು ಎಪಿಸೋಡ್‌ನಲ್ಲಿ, ಆಕೆಯ ಪಾತ್ರವು ಪಾಕಿಸ್ತಾನದಲ್ಲಿ ಶೃಂಗಸಭೆಯೊಂದು ನಡೆಯುವ ನಿರ್ಣಾಯಕ ಕಾಲಘಟ್ಟದಲ್ಲಿ, ಭಾರತೀಯ ಮೂಲದ ಕೇಸರಿ ಉಗ್ರಗಾಮಿಯೊಬ್ಬನ ನ್ಯೂಕ್ಲಿಯರ್ ದಾಳಿಯ ಸಂಚನ್ನು ವಿಫಲಗೊಳಿಸುತ್ತದೆ. ಆದರೆ ಈ ಕಥೆಯಿಂದ ತನ್ನ ಭಾವನೆಗಳಿಗೆ ಹಾನಿ ಯುಂಟಾಗಿದೆಯೆಂದು ಹೇಳಿಕೊಂಡ ಕೇಸರಿ ಬ್ರಿಗೇಡ್ ಒಂದು, ‘‘ಹಿಂದೂ ಸೇನಾವು ಪ್ರಿಯಾಂಕಾ ಚೋಪ್ರಾ ನಟಿಸಿರುವ ಯಾವುದೇ ಜಾಹೀರಾತು ಅಥವಾ ಸಿನೆಮಾಗಳನ್ನು ಬಹಿಷ್ಕರಿಸುವಂತೆ ಕರೆ ನೀಡುತ್ತದೆ ಹಾಗೂ ಆಕೆಗೆ ಭಾರತ ಪ್ರವೇಶವನ್ನು ನಿಷೇಧಿಸಬೇಕು’’ ಎಂದು ಘೋಷಿಸಿತ್ತು. ಆದರೆ ಈ ಬೆದರಿಕೆಗೆ ಅತಿಯಾಗಿ ಬಾಗಿದ ನಟಿ ಈ ರೀತಿಯಾಗಿ ಟ್ವೀಟಿಸಿದ್ದರು.‘‘ ಕ್ವಾಂಟಿಕೊ ಧಾರಾವಾಹಿಯ ಇತ್ತೀಚಿನ ಎಪಿಸೋಡ್‌ನಿಂದ ಕೆಲವರ ಭಾವನೆಗಳಿಗೆ ನೋವುಂಟಾಗಿರುವುದಕ್ಕೆ ನನಗೆ ತೀವ್ರ ವಿಷಾದವಾಗಿದೆ. ನನ್ನ ಉದ್ದೇಶವೂ ಯಾವತ್ತೂ ಆದಾಗಿ ರಲಿಲ್ಲ. ಚಲನಚಿತ್ರ ಉದ್ಯಮದ ಓರ್ವ ನಟಿ ಪೂಜಾ ಭಟ್ ಮಾತ್ರ ಚೋಪ್ರಾಗೆ ಬೆಂಬಲವಾಗಿ ನಿಂತಿದ್ದರು ಹಾಗೂ ನಟಿಯಾಗಿ ಆಕೆಗಿರುವ ಸ್ವಾತಂತ್ರವನ್ನು ಅವರು ಬೆಂಬಲಿಸಿದ್ದರು.
ಪ್ರಸಕ್ತ ಕಾಲದ ಚಲನಚಿತ್ರಗಳು ಮುಸ್ಲಿಂ ಪಾತ್ರಗಳನ್ನು ಭಯೋತ್ಪಾ ದಕರು- ತೀವ್ರವಾದಿಗಳೆಂದು ಬಿಂಬಿಸುವ ಕಥಾವಸ್ತುಗಳಿಂದ ತುಂಬಿವೆ.ಕ್ವಾಂಟಿಕೊ ಸರಣಿಯ ಎಪಿಸೋಡ್ ಒಂದರಲ್ಲಿ ಹಿಂದೂ ಪಾತ್ರವೊಂದನ್ನು ದುಷ್ಟನೆಂಬಂತೆ ಬಿಂಬಿಸಿದ್ದರಿಂದ, ನಟಿಗೆ ಬೆದರಿಕೆಯೊಡ್ಡಲಾಯಿತಲ್ಲದೆ, ಆಕೆಯ ಪೌರತ್ವವನ್ನು ರದ್ದುಪಡಿಸುವಂತೆ ಆಗ್ರಹಿಸಲಾಯಿತು. ಹಿಂಸೆಯ ಯಾವುದೇ ಕೃತ್ಯಕ್ಕೂ ಧರ್ಮದ ಹಣೆಪಟ್ಟಿಯನ್ನು ಕಟ್ಟುವುದು, 9/11ರ ಅವಳಿ ಕಟ್ಟಡ ದುರಂತದ ಬಳಿಕ ಒಂದು ಟ್ರೆಂಡ್ ಆಗಿ ಪರಿಣಮಿಸಿದೆ. ಅಫ್ಘಾನಿಸ್ತಾನದಲ್ಲಿ ರಶ್ಯದ ಅತಿಕ್ರಮಣದ ವಿರುದ್ಧ ಹೋರಾಡಲು ಸೂಪರ್ ಪವರ್ ಅಮೆರಿಕವು ಭಯೋತ್ಪಾದಕ ಗುಂಪುಗಳನ್ನು ಬೆಳೆಸಿತು ಹಾಗೂ ಅವುಗಳಿಗೆ ಬೋಧನೆಗಳನ್ನು ನೀಡಿತ್ತು. ಇಸ್ಲಾಂ ಬೋಧನೆಗಳನ್ನು ತಿರುಚಿ, ವ್ಯಾಖ್ಯಾನಿಸಿತು. ಈ ಷಡ್ಯಂತ್ರದ ಸೂತ್ರಧಾರಿಯು ವಾಶಿಂಗ್ಟನ್‌ನಲ್ಲಿ ಕುಳಿತಿದ್ದಾನೆ. ಆಗ ಮೊದಲ ಬಾರಿ ಭಯೋತ್ಪಾದನೆ ಪದವನ್ನು ಧರ್ಮದ ಜೊತೆ ತಳಕು ಹಾಕಲಾಯಿತು. ಬಹುತೇಕ ಸಮಯದಲ್ಲಿ ಹಲವಾರು ಧರ್ಮಗಳಿಗೆ ಸೇರಿದವರು ಭಯೋತ್ಪಾದನೆಯ ಕೃತ್ಯಗಳಲ್ಲಿ ಶಾಮೀಲಾಗಿದ್ದಾರೆಂಬ ವಾಸ್ತವತೆಯ ಹೊರತಾಗಿಯೂ ಅಮೆರಿಕ ಮಾಧ್ಯಮವು islamic terrorism (ಇಸ್ಲಾಮಿಕ್ ಭಯೋತ್ಪಾದನೆ ) ಎಂಬ ಪದವನ್ನು ಬಳಸಿತು. ಭಯೋತ್ಪಾದಕ ಕೃತ್ಯಗಳಲ್ಲಿ ಹಿಂದೂ ರಾಷ್ಟ್ರೀಯವಾದಿಗಳು ಶಾಮೀಲಾಗಿರುವುದಕ್ಕೆ ಭಾರತವು ಸಾಕ್ಷಿಯಾದಾಗ, ಹಿಂದೂ ಭಯೋ ತ್ಪಾದನೆ, ಕೇಸರಿ ಭಯೋತ್ಪಾದನೆ ಅಥವಾ ಹಿಂದುತ್ವ ಭಯೋತ್ಪಾದನೆ ಯೆಂಬ ಪದಗಳು ಗಾಳಿಯಲ್ಲಿ ತೇಲಿಬರತೊಡಗಿದವು. ಪ್ರಜ್ಞಾಸಿಂಗ್ ಠಾಕೂರ್ ಹಾಗೂ ಅಸೀಮಾನಂದನಂತಹವರಿಗೆ ಜಾಮೀನು ದೊರೆತ ಬಳಿಕ, ಇಂತಹ ಪದಗಳನ್ನು ಬಳಸಿದ್ದಕ್ಕಾಗಿ ಕ್ಷಮೆಯಾಚಿಸಬೇಕೆಂಬ ಒತ್ತಾಯಗಳು ಕೇಳಿಬಂದಿದ್ದವು.
2008ರ ಮಾಲೇಗಾಂವ್ ಬಾಂಬ್ ಸ್ಫೋಟದ ಬಳಿಕ ಮಹಾ ರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳದ ವರಿಷ್ಠ ಹೇಮಂತ್ ಕರ್ಕರೆ ನಡೆಸಿದ ನಿಖರವಾದ ತನಿಖೆಯಿಂದಾಗಿ, ಸ್ಫೋಟಕ್ಕೆ ಬಳಸಲಾದ ಮೋಟಾರ್‌ಸೈಕಲ್ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಸೇರಿದ್ದೆಂಬುದು ಬೆಳಕಿಗೆ ಬಂದಿತ್ತು. ಸಾಧ್ವಿ ಪ್ರಜ್ಞಾಸಿಂಗ್‌ಗೆ ವಿವಿಧ ಹಿಂದುತ್ವವಾದಿ ಸಂಘಟನೆಗಳ ನಂಟನ್ನು ಹೊಂದಿದ್ದರು. ಇದು ಲೆ.ಕ. ಪ್ರಸಾದ್ ಪುರೋಹಿತ್, ಮೇಜರ್ ಉಪಾಧ್ಯಾಯ, ಸ್ವಾಮಿ ದಯಾನಂದ ಹಾಗೂ ಸ್ವಾಮಿ ಅಸೀಮಾನಂದ ಸೇರಿದಂತೆ ಹಿಂದೂ ರಾಷ್ಟ್ರವಾದಿ ಸಂಘಟನೆಗಳಿಗೆ ಸೇರಿದ ಹಲವರ ವಿಚಾರಣೆಗೆ ಕಾರಣವಾಯಿತು. ಇವರಲ್ಲಿ ಕೆಲವರು ಆರೆಸ್ಸೆಸ್ ಜೊತೆ ನೇರವಾದ ಸಂಪರ್ಕವನ್ನು ಹೊಂದಿದ್ದರು. ತನಿಖೆಯು ಮುನ್ನಡೆದಂತೆಲ್ಲಾ, ಹಲವರ ಬಂಧನವಾಯಿತು. ಅವರಲ್ಲಿ ಇಬ್ಬರು ಅರೆಸ್ಸೆಸ್‌ನ ಮಾಜಿ ಪ್ರಚಾರಕರಾಗಿದ್ದು, ಅಜ್ಮೀರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಜೀವಾವಧಿ ಶಿಕ್ಷೆಗೆ ಗುರಿಯಾದವರಾಗಿದ್ದಾರೆ.
ಸಾಧ್ವಿ ಪ್ರಜ್ಞಾಸಿಂಗ್, ಪುರೋಹಿತ್ ಹಾಗೂ ಅಸೀಮಾನಂದ ಅಂತಹ ವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಯಿತು. ಮ್ಯಾಜಿಸ್ಟ್ರೇಟ್ ಅವರ ಸಮ್ಮುಖದಲ್ಲೇ ಅಸೀಮಾನಂದ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಲ್ಲದೆ, ಭಯೋತ್ಪಾದಕ ಕೃತ್ಯಗಳ ವಿವರಗಳನ್ನು ನೀಡಿದ್ದರು ಹಾಗೂ ಸ್ವಾಮಿ ದಯಾನಂದ ಪಾಂಡೆಯಿಂದ ವಶಪಡಿಸಿಕೊಳ್ಳಲಾದ ಲ್ಯಾಪ್‌ಟಾಪ್‌ನಿಂದ ಬಹಳಷ್ಟು ಮಾಹಿತಿಗಳು ಹೊರಬಿದ್ದವು. ಈ ತಂಡದ ಭಾಗವಾಗಿ ದ್ದನೆನ್ನಲಾದ ಸುನೀಲ್ ಜೋಶಿ ಕೊಲೆಯಾಗಿದ್ದ. ಸಾಧ್ವಿ ಪ್ರಜ್ಞಾ ಳೊಂದಿಗೆ ಲೈಂಗಿಕವಾಗಿ ದುರ್ನಡತೆಯನ್ನು ತೋರಿದ್ದಕ್ಕಾಗಿ ಆತನನ್ನು ಕೊಲೆ ಮಾಡಲಾಗಿದೆಯೆಂದು ನಂಬಲಾಗಿದೆ. ಈ ಎಲ್ಲಾ ತನಿಖೆಗಳ ಹೊರತಾಗಿಯೂ 2014ರಲ್ಲಿ ಕೇಂದ್ರದಲ್ಲಿ ಸರಕಾರದ ಬದಲಾವಣೆ ಯಿಂದಾಗಿ ಸಾಧ್ವಿ ಹಾಗೂ ಸ್ವಾಮಿಯವಂತಹವರು ಜಾಮೀನು ಬಿಡುಗಡೆಗೊಂಡರು. ಸಾಧ್ವಿ ಮತ್ತಿತರರು ಶಾಮೀಲಾಗಿರುವ ವಿವಿಧ ಪ್ರಕರಣಗಳಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕೆಲಸ ಮಾಡಿರುವ ರೋಹಿಣಿ ಸಾಲ್ಯಾನ್ ಬಳಿ, ಕೇಂದ್ರದಲ್ಲಿ ಸರಕಾರ ಬದಲಾಗಿರು ವುದರಿಂದ ಈ ಪ್ರಕರಣಗಳಲ್ಲಿ ಮೃದುವಾಗಿ ವರ್ತಿಸುವಂತೆ ಕೇಳಿಕೊಳ್ಳಲಾಗಿರುವುದು, ಈವರೆಗೆ ಉತ್ತರಿಸಲಾಗದ ಪ್ರಶ್ನೆಯಾಗಿಯೇ ಉಳಿದುಬಿಟ್ಟಿದೆ. 1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಬಳಸ ಲಾಗಿದ್ದ ಕಾರೊಂದು ರುಬಿನಾ ಮೆಮನ್ ಎಂಬಾಕೆಯ ಹೆಸರಿನಲ್ಲಿದ್ದ ಕಾರಣ ಆಕೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು. ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಸ್ಫೋಟಕ್ಕೆ ಬಳಸಲಾದ ಬೈಕ್ ಸಾಧ್ವಿ ಪ್ರಜ್ಞಾಸಿಂಗ್ ಸೇರಿತ್ತಾದರೂ ಆಕೆಯನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.
ಪ್ರಸಕ್ತ ಕಾಲಘಟ್ಟದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಜನರನ್ನು ಥಳಿಸಿದ ಪ್ರಕರಣಗಳಲ್ಲಿ ಶಾಮೀಲಾಗಿರುವ ಕೇಸರಿ ಸಂಘಟನೆಗಳ ಕಾರ್ಯಕರ್ತರ ಸಂಖ್ಯೆ ಕಳೆದ ಕೆಲವು ವರ್ಷಗಳಲ್ಲಿ ಅಗಾಧವಾಗಿ ಹೆಚ್ಚಿದೆ. ಲವ್‌ಜಿಹಾದ್ ಹೆಸರಿನಲ್ಲಿ ಅಫ್ರಝುಲ್ ಎಂಬಾತನನ್ನು ಬರ್ಬರವಾಗಿ ಹತ್ಯೆಗೈದ ಶಂಭುಲಾಲ್ ರೆಗಾರ್‌ನ ಕುಟುಂಬಕ್ಕಾಗಿ ದೇಣಿಗೆಗಳನ್ನು ಸಂಗ್ರಹಿಸಲಾಯಿತು. ಪ್ರೊ. ಕಲಬುರ್ಗಿ ಹಾಗೂ ಗೌರಿ ಲಂಕೇಶ್‌ರ ಹಂತಕರ ಸಹಚರರೆನ್ನಲಾದವರನ್ನು ರಕ್ಷಿಸಲು ಕೇಸರಿ ಸಂಘಟನೆಗಳು ಮುಂದೆ ಬರುತ್ತಿವೆ. ತಮ್ಮ ವೃತ್ತಿ ಹಾಗೂ ಸಿನೆಮಾ ಬದುಕನ್ನು ರಕ್ಷಿಸುವುದಕ್ಕಾಗಿ ಚೋಪ್ರಾರಂತಹ ತಾರೆಯರು ಕ್ಷಮೆಯಾಚನೆಯ ಮೂಲಕ ಹಿಂದಡಿ ಇಡಬಹುದು. ಆದರೆ ರಾಜಕೀಯದ ಪ್ರಪಂಚದೊಳಗೆ ಧರ್ಮವನ್ನು ಇತ್ತೀಚಿನ ವರ್ಷಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಎಳೆದುತರಲಾಗುತ್ತಿರುವುದರಿಂದ ಇಂತಹ ಬೆಳವಣಿಗೆಗಳನ್ನು ಆತಂಕದಿಂದಲೇ ಗಮನಿಸಬೇಕಾದ ಅಗತ್ಯವಿದೆ.