9 ದಿನಗಳಿಂದ ಗುಹೆಯೊಳಗೆ ಸಿಲುಕಿರುವ 12 ಫುಟ್ಬಾಲ್ ಆಟಗಾರರು, ಕೋಚ್ ಜೀವಂತ

Update: 2018-07-02 17:00 GMT

ಥಾಯ್ ಲ್ಯಾಂಡ್, ಜು.2: ಕಳೆದ 9 ದಿನಗಳ ಹಿಂದೆ ಗುಹೆಯೊಂದರ ಒಳಗೆ ಸಿಲುಕಿ ನಾಪತ್ತೆಯಾಗಿದ್ದ 12 ಫುಟ್ಬಾಲ್ ಆಟಗಾರರು ಹಾಗು ಅವರ ಕೋಚ್ ಜೀವಂತವಾಗಿದ್ದಾರೆ ಎಂದು ತಿಳಿದುಬಂದಿದೆ.

ವೈಲ್ಡ್ ಬೋರ್ ಸಾಕರ್ ತಂಡ 11ರಿಂದ 16 ವರ್ಷದೊಳಗಿನ ಬಾಲಕರು ಜೂನ್ 23ರಂದು ತೌಮ್ ಲುವಾಂಗ್ ನಾಂಗ್ ನಾನ್ ಗುಹೆಯೊಳಕ್ಕೆ ಪ್ರವೇಶಿಸಿದ್ದರು. ಆದರೆ ಭಾರೀ ಮಳೆಯಿಂದಾಗಿ ಅವರು ಗುಹೆಯೊಳಗೇ ಸಿಲುಕಿದ್ದರು. ಥಾಯ್ ನೌಕಾಪಡೆ, ಅಮೆರಿಕ, ಚೀನಾ, ಆಸ್ಟ್ರೇಲಿಯಾ ಹಾಗು ಬ್ರಿಟನ್ ನ ರಕ್ಷಣಾ ತಂಡಗಳು ಆಳವಾದ ಗುಹೆಯನ್ನು ಪ್ರವೇಶಿಸಿತ್ತು. "ಅವರೆಲ್ಲರೂ ಸುರಕ್ಷಿತವಾಗಿದ್ದಾರೆ" ಎಂದು ಚಿಯಾಂಗ್ ರಾಯ್ ಗವರ್ನರ್ ನರೋಗ್ಸಕ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

"ಗುಹೆಯೊಳಗೆ ಇರುವ ನೀರನ್ನು ಖಾಲಿ ಮಾಡಿದ ನಂತರ 13 ಮಂದಿಯನ್ನು ಹೊರಕ್ಕೆ ಕರೆತರಲಾಗುವುದು. ಅವರ ಆರೋಗ್ಯ ಸ್ಥಿತಿಯನ್ನು ಪರೀಕ್ಷಿಸಲು ವೈದ್ಯರು ಹಾಗು ನರ್ಸ್ ಗಳನ್ನು ನಾವು ಈಗ ಗುಹೆಯೊಳಕ್ಕೆ ಕಳುಹಿಸಲಿದ್ದೇವೆ" ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News