ಅಂತಾರಾಷ್ಟ್ರೀಯ ಟಿ20ಯಲ್ಲಿ ಹೊಸ ದಾಖಲೆ ಬರೆದು ಹಿಟ್ ವಿಕೆಟ್ ಆದ ಫಿಂಚ್

Update: 2018-07-03 12:16 GMT

ಹರಾರೆ, ಜು.3: ಝಿಂಬಾಬ್ವೆ ವಿರುದ್ಧ ಇಲ್ಲಿ ನಡೆಯುತ್ತಿರುವ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ 172 ರನ್ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಅತ್ಯಧಿಕ ಸ್ಕೋರ್ ಇದಾಗಿದೆ.

2013ರಲ್ಲಿ ಇಂಗ್ಲೆಂಡ್ ವಿರುದ್ಧದ ತಮ್ಮದೇ ಅತ್ಯಧಿಕ ದಾಖಲೆಯಾದ 156 ರನ್ ಗಳ ದಾಖಲೆಯನ್ನು ಅವರು ಮುರಿದರು. ಆದರೆ ಎಲ್ಲಾ ಮಾದರಿಯ ಟಿ20ಗಳಲ್ಲಿನ ಕ್ರಿಸ್ ಗೇಲ್ ಅವರ 175 ರನ್ ಗಳ ದಾಖಲೆಯನ್ನು ಮುರಿಯಲು ಅವರು ವಿಫಲರಾದರು. ಹಿಟ್ ವಿಕೆಟ್ ಮೂಲಕ ಅವರು ಔಟಾದರು.

ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 229 ರನ್ ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News