×
Ad

74 ಯಮನಿಗರಿಗೆ ಯುಎಇ ವತಿಯಿಂದ ಭಾರತದಲ್ಲಿ ಚಿಕಿತ್ಸೆ

Update: 2018-07-05 21:27 IST

ಅಬುಧಾಬಿ, ಜು. 5: ಯಮನ್‌ನಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಗಾಯಗೊಂಡಿರುವ 74 ನಾಗರಿಕರು ಮತ್ತು ಅವರ ಜೊತೆಗಾರರು ಭಾರತದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದಕ್ಕಾಗಿ ಭಾರತಕ್ಕೆ ತೆರಳಿದ್ದಾರೆ.

ಅವರ ಎಲ್ಲ ಖರ್ಚುವೆಚ್ಚಗಳನ್ನು ಯುಎಇ ಭರಿಸುತ್ತದೆ.

ಯುಎಇ ಅಧ್ಯಕ್ಷ ಶೇಖ್ ಖಲೀಫ ಬಿನ್ ಝಾಯಿದ್ ಅಲ್ ನಹ್ಯನ್‌ರ ಸೂಚನೆಯಂತೆ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಹೌದಿ ಬಂಡುಕೋರರು ಮತ್ತು ಸೇನೆಯ ನಡುವಿನ ಸಂಘರ್ಷದಲ್ಲಿ ಸಿಲುಕಿರುವ ಯಮನ್ ನಾಗರಿಕರನ್ನು ಸಂಕಷ್ಟದಿಂದ ಪಾರುಮಾಡಲು ಯುಎಇ ತೆಗೆದುಕೊಂಡಿರುವ ನಿರ್ಣಯಕ್ಕೆ ಅನುಗುಣವಾಗಿ ಈ ಬೆಳವಣಿಗೆ ನಡೆದಿದೆ.

ಗಾಯಗೊಂಡಿರುವ ಯಮನಿ ನಾಗರಿಕರನ್ನು ಸ್ವಾಗತಿಸಿ ಅವರನ್ನು ವಿವಿಧ ಆಸ್ಪತ್ರೆಗಳಿಗೆ ಸೇರಿಸುವ ಜವಾಬ್ದಾರಿಯನ್ನು ಭಾರತದಲ್ಲಿರುವ ಯುಎಇ ರಾಯಭಾರ ಕಚೇರಿ ವಹಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News