×
Ad

ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವಿಗೆ ರಶ್ಯ ಹಸ್ತಕ್ಷೇಪ : ಸೆನೆಟ್ ಗುಪ್ತಚರ ಸಮಿತಿ

Update: 2018-07-05 21:36 IST

ವಾಶಿಂಗ್ಟನ್, ಜು. 5: 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಸೋಲುವುದಕ್ಕೆ ಹಾಗೂ ಡೊನಾಲ್ಡ್ ಟ್ರಂಪ್ ಗೆಲ್ಲುವುದಕ್ಕೆ ಪೂರಕವಾಗಿ ರಶ್ಯ ಹಸ್ತಕ್ಷೇಪ ನಡೆಸಿದೆ ಎಂಬ ಅಮೆರಿಕದ ಗುಪ್ತಚರ ಸಮುದಾಯದ ನಿರ್ಧಾರವನ್ನು ಅಮೆರಿಕದ ಸೆನೆಟ್ ಸಮಿತಿಯೊಂದು ಬುಧವಾರ ದೃಢೀಕರಿಸಿದೆ.

ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಆದೇಶದಂತೆ ಹಸ್ತಕ್ಷೇಪ ನಡೆಸಲಾಗಿದೆ ಎಂಬುದಾಗಿಯೂ ಮಂಗಳವಾರ ಬಿಡುಗಡೆ ಮಾಡಿದ ವರದಿಯಲ್ಲಿ ಸೆನೆಟ್ ಗುಪ್ತಚರ ಸಮಿತಿ ತಿಳಿಸಿದೆ.

‘‘2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿದೆ ಹಾಗೂ ಈ ಹಸ್ತಕ್ಷೇಪಕ್ಕೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅನುಮೋದನೆ ನೀಡಿದ್ದರು ಹಾಗೂ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್‌ಗೆ ಹಿನ್ನಡೆ ಉಂಟುಮಾಡುವುದು ಇದರ ಉದ್ದೇಶವಾಗಿತ್ತು’’ ಎಂದು ಸಮಿತಿ ಹೇಳಿದೆ.

‘‘ಪುಟಿನ್ ಮತ್ತು ರಶ್ಯ ಸರಕಾರ ಟ್ರಂಪ್‌ಗೆ ಸ್ಪಷ್ಟ ಆದ್ಯತೆ ನೀಡಿತ್ತು’’ ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News