ಟ್ರಂಪ್ ಟ್ವೀಟ್‌ನಿಂದ ಪೆಟ್ರೋಲ್ ಬೆಲೆ ಹೆಚ್ಚುತ್ತಿದೆ: ಇರಾನ್

Update: 2018-07-05 17:52 GMT

ಟೆಹರಾನ್ (ಇರಾನ್), ಜು. 5: ಜಾಗತಿಕ ಪೆಟ್ರೋಲ್ ಬೆಲೆ ಇಳಿಯಬೇಕಾದರೆ ನೀವು ಟ್ವೀಟ್ ಮಾಡುವುದನ್ನು ನಿಲ್ಲಿಸಬೇಕು ಎಂದು ಇರಾನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಹೇಳಿದೆ.

‘‘ನಿಮ್ಮ ಟ್ವೀಟ್‌ಗಳು ಪೆಟ್ರೋಲ್ ಬೆಲೆಯನ್ನು ಬ್ಯಾರಲ್‌ಗೆ ಕನಿಷ್ಠ 10 ಡಾಲರ್‌ನಷ್ಟು ಹೆಚ್ಚಿಸಿವೆ’’ ಎಂದು ಇರಾನ್‌ನ ‘ಒಪೆಕ್’ ಗವರ್ನರ್ ಹುಸೈನ್ ಕಾಸಿಮ್‌ಪುರ್ ಅರ್ದೇಬಿಲಿ ಟ್ರಂಪ್‌ಗೆ ನೀಡಿದ ಸಂದೇಶವೊಂದರಲ್ಲಿ ಹೇಳಿದ್ದಾರೆ.

ಅವರ ಹೇಳಿಕೆಯನ್ನು ಇರಾನ್ ತೈಲ ಸಚಿವಾಲಯದ ‘ಶಾನ’ ಸುದ್ದಿ ಸಂಸ್ಥೆ ಪ್ರಕಟಿಸಿದೆ.

‘‘ದಯವಿಟ್ಟು ನಿಲ್ಲಿಸಿ. ಇಲ್ಲದಿದ್ದರೆ ಅದು ಇನ್ನಷ್ಟು ಹೆಚ್ಚುತ್ತದೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News