122ರಲ್ಲಿ 119 ಐಪಿಎಸ್ ಅಧಿಕಾರಿಗಳು ಪೊಲೀಸ್ ಅಕಾಡಮಿ ಪರೀಕ್ಷೆಯಲ್ಲಿ ಅನುತ್ತೀರ್ಣ !

Update: 2018-07-08 17:50 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜು. 8: 122ರಲ್ಲಿ 119 ಐಪಿಎಸ್ ಅಧಿಕಾರಿಗಳು ಹೈದರಾಬಾದ್‌ನಲ್ಲಿರುವ ಸರ್ದಾರ್ ವಲ್ಲಭಭಾ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡಮಿ (ಎಸ್‌ವಿಪಿಎನ್‌ಪಿಎ) ಯ ಅಗತ್ಯದ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರೂ ಪದವಿ ಪಡೆದುಕೊಂಡಿದ್ದಾರೆ. 2016ನೇ ಬ್ಯಾಚ್‌ನ 122 ಐಪಿಎಸ್ ಅಧಿಕಾರಿಗಳಲ್ಲಿ 119 ಮಂದಿ ಒಂದಕ್ಕಿಂತ ಹೆಚ್ಚಿನ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ. ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿದ್ದರೂ ಅವರು ಎಸ್‌ವಿಪಿಎನ್‌ಪಿಎಯಿಂದ ಪದವಿ ಪಡೆಯುವಲ್ಲಿ ಸಫಲರಾಗಿದ್ದಾರೆ ಹಾಗೂ ತಮಗೆ ಸಂಬಂಧಿಸಿದ ಹುದ್ದೆಯಲ್ಲಿ ಪ್ರೊಬೆಶನರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 ಐಎಎಸ್ ಅಧಿಕಾರಿಗಳು ಮುಸ್ಸೋರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಶನಲ್ ಅಕಾಡಮಿ ಆಫ್ ಅಡ್ಮಿನಿಸ್ಟ್ರೇಶನ್‌ನಲ್ಲಿ ತರಬೇತಿ ಪಡೆದರೆ, ಐಪಿಎಸ್ ಅಧಿಕಾರಿಗಳು ಎಸ್‌ವಿಪಿಎನ್‌ಪಿಎಯಲ್ಲಿ ತರಬೇತಿ ಪಡೆಯುತ್ತಾರೆ. ಒಟ್ಟು 136 ಅಧಿಕಾರಿಗಳಲ್ಲಿ 133 ಅಧಿಕಾರಿಗಳು ಒಂದಕ್ಕಿಂತ ಹೆಚ್ಚು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ. ಈ ಪರೀಕ್ಷೆ ಅಪರಾಧ ನೀತಿ ಸಂಹಿತೆ (ಸಿಆರ್‌ಪಿಸಿ) ಹಾಗೂ ಭಾರತೀಯ ದಂಡ ಸಂಹಿತೆ (ಐಪಿಸಿ)ಯನ್ನು ಒಳಗೊಂಡಿದೆ. 2ನೇ ಹಂತದ ತರಬೇತಿಯಲ್ಲಿ ಅನುತ್ತೀರ್ಣರಾದ ಅಧಿಕಾರಿಗಳು ಮರು ಪರೀಕ್ಷೆ ಎದುರಿಸಲಿದ್ದಾರೆ ಎಂದು ಪ್ರೊಬೆಷನರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದು ಅಕಾಡಮಿಯ ಇತಿಹಾಸದಲ್ಲೇ ನಡೆದ ಅಸಹಜ ಸನ್ನಿವೇಶ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News