ಬ್ರಿಟನ್ ಆಸ್ತಿ ನನ್ನ ಹೆಸರಲ್ಲಿ ಇಲ್ಲ: ಮಲ್ಯ

Update: 2018-07-08 18:03 GMT

ಸಿಲ್ವರ್‌ಸ್ಟೋನ್ (ಇಂಗ್ಲೆಂಡ್), ಜು. 8: ನ್ಯಾಯಾಲಯದ ಜಾರಿ ಅಧಿಕಾರಿಗಳು ಬ್ರಿಟನ್‌ನಲ್ಲಿರುವ ತನ್ನ ಸೊತ್ತುಗಳನ್ನು ವಶಪಡಿಸಿಕೊಳ್ಳಲು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ ಎಂದು ರವಿವಾರ ತಿಳಿಸಿರುವ ಮದ್ಯದ ದೊರೆ ವಿಜಯ್ ಮಲ್ಯ, ಆದರೆ, ಸದ್ಯ ಈ ವೈಭವೋಪೇತ ಮನೆಗಳು ತನ್ನ ಹೆಸರಿನಲ್ಲಿ ಇಲ್ಲ ಎಂದು ತಿಳಿಸಿದ್ದಾರೆ. ಹಲವು ಸಾವಿರ ಕೋಟಿ ಸಾಲ ಮರು ಪಡೆಯುವ ಸಲುವಾಗಿ ಭಾರತೀಯ ಬ್ಯಾಂಕ್‌ಗಳ ಗುಂಪು ಮಲ್ಯ ವಿರುದ್ಧ ದೂರು ದಾಖಲಿಸಿದ್ದು, ಅದರಂತೆ ಬ್ರಿಟನ್‌ನಲ್ಲಿರುವ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಬೇಕೆಂದು ಭಾರತ ಸರಕಾರ ಬ್ರಿಟನ್‌ಗೆ ಮನವಿ ಮಾಡಿದೆ.

ಬ್ರಿಟನ್ ನ್ಯಾಯಾಲಯದಲ್ಲಿರುವ ಈ ಪ್ರಕರಣದ ತೀರ್ಪು ಸೆಪ್ಟಂಬರ್ ಮೊದಲ ವಾರದಲ್ಲಿ ಹೊರಬೀಳುವ ನಿರೀಕ್ಷೆ ಇದ್ದು, ಯಾವುದೇ ರೀತಿಯ ಮೇಲ್ಮನವಿಯನ್ನು ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ.

ತನ್ನ ಫೋರ್ಸ್ ಇಂಡಿಯನ್ ಟೀಮ್ ಪರವಾಗಿ ಬ್ರಿಟಿಶ್ ಫಾರ್ಮುಲಾ 1 ಗ್ರಾಂಡ್ ಪ್ರಿಕ್ಸ್‌ನಲ್ಲಿ ಹಾಜರಾಗಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಲ್ಯ, ಬ್ರಿಟನ್‌ನಲ್ಲಿ ತನ್ನ ಹೆಸರಿನಲ್ಲಿರುವ ಸೊತ್ತನ್ನು ಅಧಿಕಾರಿಗಳಿಗೆ ಹಸ್ತಾಂತರಿಸುತ್ತೇನೆ. ಆದರೆ, ಅಲ್ಲಿರುವ ಒಂದು ಐಷಾರಾಮಿ ಮನೆ ತನ್ನ ಮಕ್ಕಳ ಹೆಸರಲ್ಲಿದ್ದರೆ, ಇನ್ನೊಂದು ತಾಯಿಯ ಹೆಸರಲ್ಲಿ ಇದೆ. ಹಾಗಾಗಿ ಅವುಗಳ ಜಪ್ತಿಗೆ ಅನುಮತಿ ನೀಡಲು ನನಗೆ ಅಧಿಕಾರವಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News