ತೆರೆಸಾ ಮೇ ಬ್ರೆಕ್ಸಿಟ್ ಯೋಜನೆಯನ್ನು ವಿರೋಧಿಸಿ ವಿದೇಶಾಂಗ ಕಾರ್ಯದರ್ಶಿ ರಾಜೀನಾಮೆ

Update: 2018-07-09 17:43 GMT

ಲಂಡನ್, ಜು.9: ಯೂರೋಪ್ ಒಕ್ಕೂಟದಿಂದ ಹೊರಬರುವ ಬ್ರಿಟನ್ ಪ್ರಧಾನಿ ತೆರೆಸಾ ಮೇ ಅವರ ಯೋಜನೆಗೆ ಸೋಮವಾರ ಹಿನ್ನಡೆಯುಂಟಾಗಿದೆ. ಬ್ರೆಕ್ಸಿಟ್‌ನಿಂದ ಹೊರಬಂದ ನಂತರವೂ ಯೂರೋಪ್ ಒಕ್ಕೂಟದ ಜೊತೆ ಸಂಬಂಧವನ್ನು ಉಳಿಸಿಕೊಳ್ಳುವ ತೆರೆಸಾ ಮೇ ಯೋಜನೆಯನ್ನು ವಿರೋಧಿಸಿ ವಿದೇಶಾಂಗ ಕಾರ್ಯದರ್ಶಿ ಬೋರಿಸ್ ಜಾನ್ಸನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತೆರೆಸಾ ಮೇ ಸರಕಾರದಲ್ಲಿ ಬ್ರೆಕ್ಸಿಟ್ ಸಚಿವರಾಗಿದ್ದ ಡೇವಿಡ್ ಡೇವಿಸ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಜಾನ್ಸನ್ ತಮ್ಮ ನಿರ್ಗಮನದ ಸುದ್ದಿಯನ್ನು ನೀಡಿದ್ದಾರೆ. ಸೋಮವಾರದಂದು ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸುವ ಬದಲಾಗಿ ಜಾನ್ಸನ್ ಕೇಂದ್ರ ಲಂಡನ್‌ನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲೇ ಮಾತುಕತೆಗಳನ್ನು ನಡೆಸಿದರು. ಇಬ್ಬರು ಗಣ್ಯರ ಹೊರಹೋಗುವಿಕೆಯಿಂದ ಬ್ರಿಟನ್‌ನ ಅತೀದೊಡ್ಡ ವಿದೇಶಿ ಮತ್ತು ವ್ಯಾಪಾರ ನೀತಿ ಪರಿವರ್ತನೆಯ ವಿಷಯದಲ್ಲಿ ಒಮ್ಮತಕ್ಕೆ ಬರಲು ಸರಕಾರ ವಿಫಲವಾಗಿರುವುದು ಬಹಿರಂಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News