2000 ವರ್ಷಗಳ ಹಿಂದೆ ಅಯೋಧ್ಯೆಯ ರಾಜಕುಮಾರಿ ಜೊತೆ ದ.ಕೊರಿಯಾ ರಾಜಕುಮಾರನ ಮದುವೆಯಾಗಿತ್ತು

Update: 2018-07-10 10:10 GMT

ನೋಯ್ಡಾ, ಜು.10: ದಕ್ಷಿಣ ಕೊರಿಯಾ ಹಾಗು ಉತ್ತರ ಪ್ರದೇಶದ ನಡುವೆ ಭಾವನಾತ್ಮಕ ಸಂಬಂಧವಿದೆ. 2000 ವರ್ಷಗಳ ಹಿಂದೆ ಅಯೋಧ್ಯೆಯ ರಾಜಕುಮಾರಿಯನ್ನು ದಕ್ಷಿಣ ಕೊರಿಯಾದ ರಾಜಕುಮಾರ ಮದುವೆಯಾಗಿದ್ದ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ .

ನೋಯ್ಡಾದಲ್ಲಿ ಸ್ಯಾಮ್ ಸಂಗ್ ಮೊಬೈಲ್ ಫ್ಯಾಕ್ಟರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಇದು ಎಲ್ಲರಿಗೂ ಮಹತ್ವದ ಕಾರ್ಯಕ್ರಮ. ದಕ್ಷಿಣ ಕೊರಿಯಾ ಹಾಗು ಉತ್ತರ ಪ್ರದೇಶದ ನಡುವೆ ಭಾವನಾತ್ಮಕ ಸಂಬಂಧವಿದೆ. 2000 ವರ್ಷಗಳ ಹಿಂದೆ ಅಯೋಧ್ಯೆಯ ರಾಜಕುಮಾರಿಯನ್ನು ಕೊರಿಯಾದ ರಾಜಕುಮಾರನಿಗೆ ಮದುವೆ ಮಾಡಿ ಕೊಡಲಾಗಿತ್ತು" ಎಂದವರು ಹೇಳಿದರು.

ಉದ್ಘಾಟನೆಗೊಂಡ ಸ್ಯಾಮ್ ಸಂಗ್ ಫ್ಯಾಕ್ಟರಿ 35 ಸಾವಿರ ಉದ್ಯೋಗಗಳನ್ನು ಒದಗಿಸಲಿದೆ. ಫ್ಯಾಕ್ಟರಿಗೆ ಬೇಕಾದ ಎಲ್ಲಾ ಸಹಕಾರವನ್ನು ಸರಕಾರ ನೀಡಲಿದ್ದು, ಭಾರತ ಹಾಗು ದಕ್ಷಿಣ ಕೊರಿಯಾ ನಡುವೆ ಉತ್ತಮ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಬಂಧವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News