ಪ್ರಪಾತದ ಅಂಚಿನಲ್ಲಿ ಕುಳಿತುಕೊಂಡು ಪ್ರಕೃತಿ ಸೌಂದರ್ಯ ಆಸ್ವಾದಿಸುತ್ತ ಭೋಜನ ಮಾಡಬೇಕೇ..? ಹಾಗಾದರೆ ಇಲ್ಲಿಗೆ ಭೇಟಿ ನೀಡಿ

Update: 2018-07-10 12:32 GMT

ಚೀನಾದಲ್ಲಿ ಭೋಜನ ಕೂಟಗಳು ಹೊಸ ಎತ್ತರವನ್ನು ತಲುಪಿವೆ. ಇದು ನಿಜಕ್ಕೂ ಹೊಸ ಎತ್ತರವೇ. ಇಲ್ಲಿ ಸಮುದ್ರ ಮಟ್ಟದಿಂದ 7,000 ಅಡಿಗೂ ಹೆಚ್ಚಿನ ಎತ್ತರದಲ್ಲಿ ಅತ್ಯಂತ ಅಪಾಯಕಾರಿ ಜಾಗದಲ್ಲಿ ಕುಳಿತುಕೊಂಡು ಅದ್ಭುತ ಪ್ರಕೃತಿ ಸೌಂದರ್ಯವನ್ನು ಕಣ್ಣುಗಳಲ್ಲಿ ತುಂಬಿಕೊಳ್ಳುತ್ತ ರಸಗವಳವನ್ನು ಸವಿಯಬಹುದು. ಚೀನಾದ ಪ್ರಮುಖ ಪ್ರವಾಸೋದ್ಯಮ ಆಕರ್ಷಣೆಯಾಗಿರುವ ಹೆನಾನ್ ಪ್ರಾಂತ್ಯದ ಮೌಂಟ್ ಲಾವೊಜನ್ ಪರ್ವತದಲ್ಲಿ ಪ್ರವಾಸಿಗಳಿಗಾಗಿ ಈ ಭೋಜನಕೂಟವನ್ನು ಏರ್ಪಡಿಸಲಾಗುತ್ತದೆ. ತೀರ ಇತ್ತೀಚಿಗೆ ಏರ್ಪಡಿಸಲಾಗಿದ್ದ ಇಂತಹ ಭೋಜನಕೂಟದಲ್ಲಿ ಸಾವಿರಾರು ಪ್ರವಾಸಿಗಳು ಪಾಲ್ಗೊಂಡಿದ್ದರು. ಪರ್ವತದ ಕಡಿದಾದ ಅಂಚಿನಲ್ಲಿ ನೂರಾರು ಮೀಟರ್ ಉದ್ದದ ಆರು ಅಡಿ ಅಗಲದ ಫುಟ್‌ಪಾತ್ ನಿರ್ಮಿಸಿ ಅದರುದ್ದಕ್ಕೂ ಡೈನಿಂಗ್ ಟೇಬಲ್ ನಿರ್ಮಿಸಿ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.

ಈ ಅಪಾಯಕಾರಿ ಜಾಗದಲ್ಲಿ ನಿಂತು ಕೆಳಕ್ಕೆ ನೋಡಿದರೆ ಖಂಡಿತ ತಲೆ ತಿರುಗುತ್ತದೆ. ಆದರೆ ಸೂಕ್ತ ರಕ್ಷಣಾ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದ್ದು,ಪ್ರವಾಸಿಗಳು ಯಾವುದೇ ಆತಂಕವಿಲ್ಲದೆ ಸ್ಮರಣೀಯ ಅನುಭವವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮೌಂಟ್ ಲಾವೊಜನ್ ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ವೀಕ್ಷಿಸಲು ಅತ್ಯಂತ ಪ್ರಶಸ್ತ ತಾಣವಾಗಿದ್ದು,ಕಡಿದಾದ ಪರ್ವತದ ಅಂಚಿನಲ್ಲಿ ನಿರ್ಮಿಸಿರುವ ವಾಕ್ ವೇ ಪ್ರಮುಖ ಆಕರ್ಷಣೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News