ಗಾಝಾ ಪಟ್ಟಿ ಜೊತೆಗಿನ ಸರಕು ಗಡಿದ್ವಾರ ಮುಚ್ಚುಗಡೆ: ಇಸ್ರೇಲ್‌ಗೆ ವಿಶ್ವಸಂಸ್ಥೆ ತರಾಟೆ

Update: 2018-07-11 17:19 GMT

ಜೆರುಸಲೇಮ್, ಜು. 11: ಗಾಝಾ ಪಟ್ಟಿಯೊಂದಿಗೆ ಇರುವ ತನ್ನ ಏಕೈಕ ಸರಕು ಗಡಿದ್ವಾರವನ್ನು ಮುಚ್ಚಿರುವ ಇಸ್ರೇಲ್‌ನ ಕ್ರಮವನ್ನು ವಿಶ್ವಸಂಸ್ಥೆ ಮಂಗಳವಾರ ಟೀಕಿಸಿದೆ ಹಾಗೂ ಈ ಕ್ರಮವು ಋಣಾತ್ಮಕ ಪರಿಣಾಮಗಳನ್ನು ಹೊಂದಿದೆ ಎಂದು ಎಚ್ಚರಿಸಿದೆ.

ತನ್ನ ನಿರ್ಧಾರವನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ವಿಶ್ವಸಂಸ್ಥೆಯ ವಿಶೇಷ ಸಮನ್ವಯಕಾರ ನಿಕೊಲಾಯ್ ಮ್ಲಾದೆನೊವ್ ಇಸ್ರೇಲನ್ನು ಒತ್ತಾಯಿಸಿದ್ದಾರೆ.

ತುರ್ತು ಮಾನವೀಯ ನೆರವುಗಳನ್ನು ಹೊರತುಪಡಿಸಿ, ಇತರ ಎಲ್ಲ ಚಟುವಟಿಕೆಗಳಿಗೆ ತಾನು ಕೆರಮ್ ಶಾಲೊಮ್ ಗಡಿ ದ್ವಾರವನ್ನು ಸೋಮವಾರ ಮುಚ್ಚಿರುವುದಾಗಿ ಇಸ್ರೇಲ್ ಹೇಳಿರುವುದನ್ನು ಸ್ಮರಿಸಬಹುದಾಗಿದೆ. ಕಳೆದ ಕೆಲವು ತಿಂಗಳುಗಳ ಅವಧಿಯಲ್ಲಿ ಗಾಝಾದಿಂದ ಇಸ್ರೇಲ್‌ಗೆ ಸ್ಫೋಟಕಗಳನ್ನು ಹೊತ್ತು ಹಾರುತ್ತಿರುವ ಗಾಳಿಪಟ ಮತ್ತು ಬಲೂನ್‌ಗಳಿಗೆ ಪ್ರತಿಯಾಗಿ ತಾನು ಈ ಕ್ರಮ ತೆಗೆದುಕೊಂಡಿರುವುದಾಗಿ ಅದು ಹೇಳಿದೆ.

ಹಮಾಸನ್ನು ದುರ್ಬಲಗೊಳಿಸುವ ಪ್ರಯತ್ನವಾಗಿ ಇಸ್ರೇಲ್ ಮತ್ತು ಈಜಿಪ್ಟ್ ಹತ್ತು ವರ್ಷಗಳಿಂದ ಗಾಝಾದ ಮೇಲೆ ದಿಗ್ಬಂಧನ ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ.

ಈ ದಿಗ್ಬಂಧನದಿಂದಾಗಿ ಫೆಲೆಸ್ತೀನ್ ಜನರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

 ಇಸ್ರೇಲ್‌ನ ಇತ್ತೀಚಿನ ಕ್ರಮದ ಪರಿಣಾಮಗಳ ಬಗ್ಗೆ ತಾನು ಚಿಂತಿತನಾಗಿದ್ದೇನೆ ಎಂದು ವಿಶ್ವಸಂಸ್ಥೆಯ ವಿಶೇಷ ಸಮನ್ವಯಕಾರ ಹೇಳಿದ್ದಾರೆ.

‘‘ಮಾನವೀಯ ನೆರವು ವ್ಯಾಪಾರ ಮತ್ತು ವಾಣಿಜ್ಯಕ್ಕೆ ಬದಲಿಯಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News