ಕ್ರೊವೇಶಿಯಾಗೆ ಚೊಚ್ಚಲ ವಿಶ್ವಕಪ್ ಫೈನಲ್ ಸಂಭ್ರಮ

Update: 2018-07-12 04:04 GMT

ಮಾಸ್ಕೊ, ಜು.12: ಕ್ರೊವೇಶಿಯಾ ಕೊನೆಕ್ಷಣದಲ್ಲಿ ಪ್ರದರ್ಶಿಸಿದ ಪ್ರತಿ ಹೋರಾಟದಿಂದಾಗಿ ಫಿಫಾ ವಿಶ್ವಕಪ್ ಫುಟ್ಬಾಲ್-2018 ಟೂರ್ನಿಯ ಫೈನಲ್‌ಗೇರುವ ಇಂಗ್ಲೆಂಡ್ ಕನಸು ನುಚ್ಚು ನೂರಾಯಿತು. 2-1 ಗೋಲುಗಳಿಂದ ಇಂಗ್ಲೆಂಡ್ ಸವಾಲನ್ನು ಬದಿಗೊತ್ತಿದ ಕ್ರೊವೇಶಿಯಾ ಮೊಟ್ಟಮೊದಲ ಬಾರಿಗೆ ವಿಶ್ವಕಪ್ ಫೈನಲ್ ತಲುಪಿತು. ಕ್ರೊವೇಶಿಯಾ ಫೈನಲ್‌ನಲ್ಲಿ ಫ್ರಾನ್ಸ್ ಸವಾಲು ಎದುರಿಸಲಿದೆ.

ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಲು ದೊಡ್ಡ ಸಂಖ್ಯೆಯ ಅಭಿಮಾನಿಗಳು ಸೇರಿದ್ದರು. ಪಶ್ಚಿಮ ಜರ್ಮನಿ ವಿರುದ್ಧ 1990ರಲ್ಲಿ ಸೆಮಿಫೈನಲ್ ಸೆಣೆಸಿದ್ದು ಬಿಟ್ಟರೆ, ಇಂಗ್ಲೆಂಡ್‌ಗೆ ಇದು ಅತಿದೊಡ್ಡ ಪಂದ್ಯವಾಗಿತ್ತು. ಇಂಗ್ಲೆಂಡ್ ವಿರುದ್ಧ ಪಂದ್ಯದುದ್ದಕ್ಕೂ ಹೆಣಗಿದ ಕ್ರೊವೇಶಿಯಾ ಕೊನೆಕ್ಷಣದಲ್ಲಿ ಮರುಹೋರಾಟ ಸಂಘಟಿಸಿ, ನಂಬಲಸಾಧ್ಯ ಜಯ ಸಂಪಾದಿಸಿ ಬೀಗಿತು.

ಮಾರಿಯೊ ಮಂಡ್ಸ್‌ಕಿಕ್ ಅವರು ಹೆಚ್ಚುವರಿ ವೇಳೆಯ ದ್ವಿತೀಯಾರ್ಧದಲ್ಲಿ ಹೊಡೆದ ಅದ್ಭುತ ಗೋಲು ಗರೆತ್ ಸೌತ್‌ಗತ್ ತಂಡವನ್ನು ಹೊರದಬ್ಬಿತು. ಕಿರೆನ್ ಟ್ರಿಪ್ಪರ್ ಅವರ ಫ್ರೀ ಕಿಕ್ ಕ್ರೊವೇಶಿಯನ್ ನೆಟ್ ಸೇರಿದಾಗ ಗೋಲ್‌ಕೀಪರ್ ಮೂಕಪ್ರೇಕ್ಷಕರಾಗಬೇಕಾಯಿತು. ಅಲ್ಲಿಂದ ಪಂದ್ಯದ ಪ್ರಥಮಾರ್ಧದಲ್ಲಿ ಇಂಗ್ಲೆಂಡ್ ಪ್ರಾಬಲ್ಯ ಸ್ಥಾಪಿಸಿತ್ತು. ಆದರೆ ಹ್ಯಾರಿ ಮಗೂರ್ ಅವರಿಗೆ ಎರಡು ಬಾರಿ ದೊರಕಿದ ಗೋಲು ಗಳಿಸುವ ಅವಕಾಶಗಳು ವ್ಯರ್ಥವಾದವು.

ಇವಾನ್ ಪೆರಿಸಿಕ್ ಗೋಲಿನೊಂದಿಗೆ ಸಮಬಲ ಸ್ಥಾಪಿಸಿದ ಕ್ರೊವೇಶಿಯಾ ಪಂದ್ಯದ ಗತಿಯನ್ನೇ ಬದಲಿಸಿತು. ಪೆರಿಸಿಕ್ ಅವರಿಗೂ ಮತ್ತೆರಡು ಗೋಲು ಗಳಿಸುವ ಅವಕಾಶ ವ್ಯರ್ಥವಾಯಿತು. ಆದರೆ ಪಂದ್ಯದ ಹೆಚ್ಚುವರಿ ಅವಧಿ ಮುಗಿಯಲು ನಾಲ್ಕು ನಿಮಿಷಗಳಿದ್ದಾಗ, ಮಂಡ್ಸ್‌ಕಿಕ್ ಅದ್ಭುತ ಗೋಲಿನೊಂದಿಗೆ ಐತಿಹಾಸಿಕ ಸಾಧನೆಯ ರೂವಾರಿ ಎನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News