ಅಮೆರಿಕದ ಶ್ರೀಮಂತ ಮಹಿಳೆಯರ ‘ಫೋರ್ಬ್ಸ್’ ಪಟ್ಟಿಯಲ್ಲಿ ಇಬ್ಬರು ಭಾರತೀಯರು

Update: 2018-07-12 17:11 GMT

ನ್ಯೂಯಾರ್ಕ್, ಜು. 12: ಸ್ವಂತ ಪರಿಶ್ರಮದಿಂದ ಮುಂದೆ ಬಂದ ಅಮೆರಿಕದ 60 ಅತ್ಯಂತ ಶ್ರೀಮಂತ ಮಹಿಳೆಯರ ‘ಫೋರ್ಬ್ಸ್’ ಪಟ್ಟಿಯಲ್ಲಿ ಇಬ್ಬರು ಭಾರತೀಯ ಮೂಲದ ಮಹಿಳೆಯರಿದ್ದಾರೆ.

ತಂತ್ರಜ್ಞಾನ ಕಂಪೆನಿಗಳ ಒಡತಿಯರಾಗಿರುವ ಜಯಶ್ರೀ ಉಳ್ಳಾಲ್ ಮತ್ತು ನೀರಜಾ ಸೇಥಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತೀಯ ಮೂಲದವರು. 1.3 ಬಿಲಿಯ ಡಾಲರ್ (ಸುಮಾರು 9,000 ಕೋಟಿ ರೂಪಾಯಿ) ಸಂಪತ್ತು ಹೊಂದಿರುವ ಜಯಶ್ರೀ ಉಳ್ಳಾಲ್ 18ನೇ ಸ್ಥಾನವನ್ನು ಪಡೆದರೆ, ಒಂದು ಬಿಲಿಯ ಡಾಲರ್ (ಸುಮಾರು 7,000 ಕೋಟಿ ರೂಪಾಯಿ) ಸಂಪತ್ತಿನ ಒಡತಿ ನೀರಜಾ 21ನೇ ಸ್ಥಾನದಲ್ಲಿದ್ದಾರೆ. ಲಂಡನ್‌ನಲ್ಲಿ ಹುಟ್ಟಿ ಹೊಸದಿಲ್ಲಿಯಲ್ಲಿ ಬೆಳೆದ 57 ವರ್ಷದ ಜಯಶ್ರೀ ಕಂಪ್ಯೂಟರ್ ನೆಟ್‌ವರ್ಕಿಂಗ್ ಕಂಪೆನಿ ‘ಅರಿಸ್ಟಾ ನೆಟ್‌ವರ್ಕ್ಸ್’ನ ಅಧ್ಯಕ್ಷೆ ಹಾಗೂ ಸಿಇಒ ಆಗಿದ್ದಾರೆ. 63 ವರ್ಷದ ನೀರಜಾ ಸೇಥಿ ಮಾಹಿತಿ ತಂತ್ರಜ್ಞಾನ ಸಲಹಾ ಮತ್ತು ಪರಭಾರೆ ಕಂಪೆನಿ ‘ಸಿಂಟೆಲ್’ನ ಉಪಾಧ್ಯಕ್ಷೆಯಾಗಿದ್ದಾರೆ. ಈ ಕಂಪೆನಿಯನ್ನು ಅವರು ತನ್ನ ಗಂಡ ಭರತ್ ದೇಸಾಯಿ ಜೊತೆಗೆ 1980ರಲ್ಲಿ ಮಿಶಿಗನ್‌ನ ಟ್ರಾಯ್‌ನಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಸ್ಥಾಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News