ಬಾಲಕಿಯರು ಶಿಕ್ಷಣ ಪಡೆಯದಿದ್ದರೆ ಜಗತ್ತಿಗೆ ವಾರ್ಷಿಕ 2,053 ಲಕ್ಷ ಕೋಟಿ ರೂ.ನಷ್ಟ!

Update: 2018-07-12 17:51 GMT

 ನ್ಯೂಯಾರ್ಕ್, ಜು. 12: ಬಾಲಕಿಯರು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸದಿದ್ದರೆ, ವರಮಾನ ಮತ್ತು ಉತ್ಪಾದಕತೆ ಕೊರತೆಯ ರೂಪದಲ್ಲಿ ಜಗತ್ತು ವಾರ್ಷಿಕ 30 ಟ್ರಿಲಿಯ ಡಾಲರ್ (ಸುಮಾರು 2,053 ಲಕ್ಷ ಕೋಟಿ ರೂಪಾಯಿ) ಕಳೆದುಕೊಳ್ಳುತ್ತದೆ ಎಂದು ವಿಶ್ವಬ್ಯಾಂಕ್ ಬುಧವಾರ ಹೇಳಿದೆ.

ಆದಾಗ್ಯೂ, ಜಗತ್ತಿನಾದ್ಯಂತ 13 ಕೋಟಿಗೂ ಅಧಿಕ ಬಾಲಕಿಯರು ಶಾಲೆಯಿಂದ ಹೊರಗಿದ್ದಾರೆ ಎಂದು ಅದು ತಿಳಿಸಿದೆ.

ಸೆಕಂಡರಿ (12ನೇ ತರಗತಿ) ಶಿಕ್ಷಣವನ್ನು ಮುಗಿಸಿದ ಮಹಿಳೆಯರು ಶಾಲೆಗೆ ಹೋಗದವರಿಗಿಂತ ಸರಾಸರಿ ಸುಮಾರು ದುಪ್ಪಟ್ಟು ಹೆಚ್ಚು ಸಂಪಾದಿಸುತ್ತಾರೆ ಎಂದು ವಿಶ್ವಬ್ಯಾಂಕ್‌ನ ವರದಿಯೊಂದು ತಿಳಿಸಿದೆ.

 ಜಗತ್ತಿನಾದ್ಯಂತ ಆರರಿಂದ 17 ವರ್ಷಗಳ ನಡುವಿನ ಸುಮಾರು 13.2 ಕೋಟಿ ಬಾಲಕಿಯರು ಶಾಲೆಗೆ ಹೋಗುತ್ತಿಲ್ಲ. ಕಡಿಮೆ ಆದಾಯದ ದೇಶಗಳ ಮೂರನೇ ಎರಡಕ್ಕಿಂತಲೂ ಕಡಿಮೆ ಪ್ರಮಾಣದ ಬಾಲಕಿಯರು ಪ್ರಾಥಮಿಕ ಶಿಕ್ಷಣವನ್ನು ಮುಗಿಸುತ್ತಾರೆ ಹಾಗೂ ಕೇವಲ ಮೂರನೇ ಒಂದು ಭಾಗದಷ್ಟು ಬಾಲಕಿಯರು ಹೈಸ್ಕೂಲ್ ಶಿಕ್ಷಣ (ಲೋವರ್ ಸೆಕೆಂಡರಿ)ವನ್ನು ಪೂರೈಸುತ್ತಾರೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.

ಜಗತ್ತಿನ ಪ್ರತಿ ಬಾಲಕಿಯು 12 ವರ್ಷಗಳ ಗುಣಮಟ್ಟದ ಶಿಕ್ಷಣವನ್ನು ಪಡೆದರೆ, ಮಹಿಳೆಯರ ಜೀವಮಾನದ ಗಳಿಕೆ ಪ್ರತಿ ವರ್ಷ 15 ಟ್ರಿಲಿಯನ್ ಡಾಲರ್‌ನಷ್ಟು ಹೆಚ್ಚಾಗಿ 30 ಟ್ರಿಲಿಯನ್ ಡಾಲರ್‌ಗೆ ಏರುತ್ತದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News