ಪ್ರವಾಹ ಪೀಡಿತ ಜಪಾನ್‌ನಲ್ಲಿ ನೀರಿನ ತೀವ್ರ ಕೊರತೆ: 200 ತಲುಪಿದ ಮೃತರ ಸಂಖ್ಯೆ

Update: 2018-07-12 17:39 GMT

ಟೋಕಿಯೊ, ಜು. 12: ಪ್ರವಾಹಪೀಡಿತ ಪಶ್ಚಿಮ ಜಪಾನ್‌ನಲ್ಲಿ ತೀವ್ರ ಉಷ್ಣತೆ ಮತ್ತು ನೀರಿನ ಕೊರತೆ ಎದುರಾಗಿದ್ದು, ರೋಗ ಹರಡುವ ಭೀತಿ ಎದುರಾಗಿದೆ. ಅದೇ ವೇಳೆ, ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 200ನ್ನು ತಲುಪಿದೆ.

ಜಪಾನ್‌ನಲ್ಲಿ 36 ವರ್ಷಗಳ ಅವಧಿಯಲ್ಲಿ ತಲೆದೋರಿದ ಅತ್ಯಂತ ಭೀಕರ ಜಲಪ್ರಳಯ ಇದಾಗಿದೆ.

 ಪಶ್ಚಿಮ ಜಪಾನ್‌ನಲ್ಲಿ ಒಂದು ವಾರದ ಹಿಂದೆ ಸುರಿದ ಭಾರೀ ಮಳೆಯು ಭೀಕರ ಪ್ರವಾಹ ಮತ್ತು ಸರಣಿ ಭೂಕುಸಿತಗಳನ್ನು ಸೃಷ್ಟಿಸಿದ್ದು, 2 ಲಕ್ಷಕ್ಕೂ ಅಧಿಕ ಮನೆಗಳಿಗೆ ನೀರು ಪೂರೈಕೆ ನಿಂತು ಹೋಗಿದೆ.

ಬೆಟ್ಟಗಳ ತಪ್ಪಲು ಮತ್ತು ನದಿ ಪಾತ್ರಗಳಲ್ಲಿ ದಶಕಗಳಿಂದ ವಾಸಿಸುತ್ತಿದ್ದ ಜನರು ಸಾವು ಮತ್ತು ವಿನಾಶವನ್ನು ಎದುರಿಸುತ್ತಿದ್ದಾರೆ.

ಹಲವು ಡಝನ್ ಜನರು ಈಗಲೂ ನಾಪತ್ತೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News